Kannada NewsKarnataka News

ಸಭೆ ಕರೆದಿದ್ದು ನಾನಲ್ಲ, ಅವರು ಎಂದ ಉಮೇಶ ಕತ್ತಿ; ಕರೆದವರೂ ದೊಡ್ಡವರಲ್ಲ, ಬಂದವರೂ ದೊಡ್ಡವರಲ್ಲ !

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಶನಿವಾರ ಸಂಜೆ ತಮ್ಮ ಮನೆಯಲ್ಲಿ ನಡೆದ ಸಭೆ ಆಯೋಜಿಸಿದ್ದು ನಾನಲ್ಲ, ಸಭೆಗೆ ಆಹ್ವಾನಿಸಿದವರು ಮಹಾಂತೇಶ ಕವಟಗಿಮಠ ಎಂದು ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.

ಹುಕ್ಕೇರಿಯಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ಯಾವುದೇ ಗುಪ್ತ ಸಭೆ ನಡೆದಿಲ್ಲ, ನಾನು ಯಾರನ್ನೂ ಕರೆದಿರಲೂ ಇಲ್ಲ, ಮಹಾಂತೇಶ ಕವಟಗಿಮಠ ಎಲ್ಲರನ್ನೂ ಸೇರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

Home add -Advt

ಸಭೆಯಲ್ಲಿ ಯಾವುದೇ ಗುಪ್ತ ಸಮಾಲೋಚನೆ ಆಗಿಲ್ಲ. ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನ ಕುರಿತು ಹಾಗೂ ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗೆ ಸಿದ್ಧತೆ ಕುರಿತು ಚರ್ಚೆ ಆಗಿದೆ ಎಂದು ವಿವರಿಸಿದರು.

ಕರೆದವರೂ ದೊಡ್ಡವರಲ್ಲ, ಬಂದವರೂ ದೊಡ್ಡವರಲ್ಲ !

ಜಾರಕಿಹೊಳಿ ಸಹೋದರರನ್ನು ಹೊರಗಿಟ್ಟು ಸಭೆ ನಡೆಸಿದ್ದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಉಮೇಶ ಕತ್ತಿ ಸಭೆಗೆ ಯಾರನ್ನೂ ಯಾರೂ ಕರೆದಿಲ್ಲ, ಕರೆದವ ಯಾವನೂ ದೊಡ್ಡವನಲ್ಲ, ಬಂದವ ಯಾವನೂ ದೊಡ್ಡವನಲ್ಲ ಎಂದರು.

ವಿಧಾನಪರಿಷತ್ ಚುನಾವಣೆಯಲ್ಲಿ ಮಹಾಂತೇಶ ಕವಟಗಿಮಠ ಸೋಲಿನ ಬಗ್ಗೆ ವಿಸ್ತಾರವಾಗಿ ಚರ್ಚೆ ಆಗಿದೆಯಷ್ಟೆ, ಅಲ್ಲದೇ ಮುಂದಿನ ಜಿಲ್ಲಾಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ವಶಕ್ಕೆ ಜಿಲ್ಲಾಪಂಚಾಯ್ತಿಯನ್ನು ಪಡೆಯುವ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಗಿದೆ ಎಂದರು.

ರಹಸ್ಯ ಸಭೆಗೆ ತಿರುಗೇಟು ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ ಬಿಜೆಪಿಯಲ್ಲಿ ಭಾರೀ ಬೆಳವಣಿಗೆ: ಜಾರಕಿಹೊಳಿ ಬ್ರದರ್ಸ್ ನಿಂದ ಬಿಜೆಪಿಗೆ ಡ್ಯಾಮೇಜ್, ಕಂಟ್ರೋಲ್ ಗೆ ತಂತ್ರಗಾರಿಕೆ ಹೆಣೆದ ನಾಯಕರು

Related Articles

Back to top button