
ಪ್ರಗತಿವಾಹಿನಿ ಸುದ್ದಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವಜ್ರೋಧ್ಯಮಿ ಮೆಹುಲ್ ಚೋಕ್ಸಿ ಬಂಧನವಾಗಿದೆ.
ಬೆಲ್ಜಿಯಂ ನಲ್ಲಿ ಭ್ರಷ್ಟ ಉದ್ಯಮಿಯನ್ನು ಬಂಧಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾ,೮೫೦ ಕೋಟಿ ಸಾಲ ಪಡೆದಿದ್ದ ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಾಲ ಅರುಪಾವತಿ ಮಾಡದೇ ವಿದೇಶಕ್ಕೆ ಪರಾರಿಯಾಗಿದ್ದರು. ಇಬ್ಬರಿಗಾಗಿ ಜಾರಿ ನಿರ್ದೇಶನಾಲಯ ಹುಡುಕಾಟ ನಡೆಸುತ್ತಿದೆ.
ಇದೀಗ ಭಾರತ ಸರ್ಕಾರದ ಮನವಿ ಮೇರೆಗೆ ಬೆಲ್ಜಿಯಂ ನಲ್ಲಿ ಮೆಹುಲ್ ಚೋಕ್ಸಿಯನ್ನು ಬಂಧಿಸಲಾಗಿದ್ದು, ಜೈಲುಪಾಲಾಗಿದ್ದಾರೆ.