Karnataka News

*ಲಾಡ್ಜ್ ನ ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾದ ಉದ್ಯಮಿ*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ ಮೂಲದ ಉದ್ಯಮಿಯೊಬ್ಬರು ಶಿವಮೊಗ್ಗದ ಲಾಡ್ಜ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

Home add -Advt

ಬಸವರಾಜ್ (50) ಮೃತ ಉದ್ಯಮಿ. ಶಿವಮೊಗ್ಗ ನಗರದ ಲಾಡ್ ವೊಂದರಲ್ಲಿ ಏ.10ರಂದು ರೂಂ ಪಡೆದು ರೂಮಿಗೆ ಹೋಗಿದ್ದ ಬಸವರಾಜ್ ನಾಲ್ಕು ದಿನಗಳದಾರೂ ರೂಮಿನಿಂದ ಹೊರ ಬಂದಿಲ್ಲ. ಲಾಡ್ಜ್ ಸಿಬ್ಬಂದಿ ರೂಮಿನ ಬಳಿ ಹೋಗಿ ಕರೆದರೂ ಪ್ರತಿಕ್ರಿಯೆ ಇರಲಿಲ್ಲ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ದೊಡ್ಡಪೇಟೆ ಪೊಲೀಸರು ರೂಂ ಬಾಗಿಲು ಒಡೆದು ನೋಡಿದಾಗ ರೂಮಿನ ಬಾತ್ ರೂಂ ನಲ್ಲಿ ಬಸವರಾಜ್ ಶವವಾಗಿ ಪತ್ತೆಯಾಗಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button