Belagavi NewsBelgaum NewsKannada NewsKarnataka News
*ಟಿಸಿ ಏರಿ ಹಾಡು ಹೇಳುತ್ತ ಕುಳಿತ ವ್ಯಕ್ತಿ: ಕೆಳಗಿಳಿಸಲು ಹೆಸ್ಕಾಂ ಸಿಬ್ಬಂದಿಯ ಹರಸಾಹಸ*
ಪ್ರಗತಿವಾಹಿನಿ ಸುದ್ದಿ: ಕರೆಂಟ್ ಹೋದ ಸಮಯದಲ್ಲಿ ಮಾನಸಿಕ ಅಸ್ವಸ್ಥ ಯುವಕನೋರ್ವ ವಿದ್ಯುತ್ ಕಂಬದ ಟಿಸಿ ಏರಿ ಹಾಡು ಹೇಳುತ್ತ ಕುಳಿತ ಘಟನೆ ಬೆಳಗಾವಿ ಟಿಳಕಚೌಕದಲ್ಲಿ ನಡೆದಿದೆ. ಇದನ್ನು ಕಂಡ ಜನರು ಹೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಟಿಸಿ ಮೇಲಿದ್ದವನನ್ನು ಕೆಳಗೆ ಇಳಿಸಲು ಹೇಳಿದ್ದಾರೆ.
ಟಿಳಕಚೌಕ್ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಅಂಗಡಿ ಮುಂಗಟ್ಟುಗಳ ಮುಂದೆ ವಾಸ ಇರುವ ಇತ ಮಾನಸಿಕ ಅಸ್ವಸ್ಥ. ಸಂಜೆ ವಿದ್ಯುತ್ ಕಡಿತಗೊಂಡಿದ್ದರಿಂದ ಟಿಸಿ ಕಂಬ ಏರಿ ಏ ದೋಸ್ತೀ ಹಮ್ ನಹೀ ಚೋಡೇಂಗೆ ಎಂದು ಹಾಡು ಹಾಡಿ ಟಿಸಿ ಮೇಲೆ ಕುಳಿತು ಜನರತ್ತ ಕೈ ಬಿಸುತ್ತಿದ್ದ. ಈ ವೇಳೆ ಜನರು ಗಮನಿಸಿ ಹೆಸ್ಕಾಂ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಸ್ಕಾಂ ಸಿಬ್ಬಂದಿಗಳು ಆತನನ್ನು ಕೆಳಗೆ ಇಳಿಸಲು ಹರಸಾಹಸ ಪಟ್ಟರು. ಸುಮಾರು 40 ನಿಮಿಷಗಳ ಕಾಲ ಟಿಳಕಚೌಕನಲ್ಲಿ ಸಂಚಾರ ದಟ್ಟಣೆಯಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ