Cancer Hospital 2
Beereshwara 33
LaxmiTai 5

*ನಿಪ್ಪಾಣಿಯಿಂದ ಶ್ರೀ ಅಂಬಿಕಾ ದೇವಸ್ಥಾನದವರೆಗೆ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲಿ ಹಾಗೂ 2 ನೇ ಬಾರಿಗೆ ಅಣ್ಣಾಸಾಹೇಬ ಜೊಲ್ಲೆ ಲೋಕಸಭೆಗೆ ಆಯ್ಕೆಯಾಗಲಿ ಎಂದು ನಿಪ್ಪಾಣಿಯಿಂದ ಅಂಬಿಕಾ ದೇವಸ್ಥಾನದವರೆಗೆ ಬಿಜೆಪಿಕಾರ್ಯಕರ್ತರು ಪಾದಯಾತ್ರೆ ನಡೆಸಿದರು.

ಶುಕ್ರವಾರ ಶ್ರೀ ರಾಮ ಸೇನಾ ಹಿಂದೂಸ್ಥಾನ ನಿಪ್ಪಾಣಿ ವತಿಯಿಂದ ಆಯೋಜಿಸಿದ್ದ ನಿಪ್ಪಾಣಿ ನಗರದ ಹಾಲಸಿದ್ದನಾಥ ಮಂದಿರದಿಂದ ಮಮದಾಪೂರ ಗ್ರಾಮದ 400 ವರ್ಷಗಳ ಇತಿಹಾಸವಿರುವ ಶ್ರೀ ಅಂಬಿಕಾ ಮಂದಿರವರೆಗೆ ಪಾದಯಾತ್ರೆಯನ್ನು ನಗರಸಭೆ ಸದಸ್ಯರು,ಸ್ಥಳೀಯ ಮುಖಂಡರು,ಮಹಿಳಾ ಮೋರ್ಚಾ ಸದಸ್ಯರು,ಪಕ್ಷದ ಕಾರ್ಯಕರ್ತರು ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. ಬಸವಪ್ರಸಾದ ಜೊಲ್ಲೆ ಯವರು ಪಾದಯಾತ್ರೆ ನಡೆಸಿ ಶ್ರೀ ಅಂಬಿಕಾ ಮಾತೆಗೆ ಪೂಜೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲು ಮತ್ತು ಸಂಸದರಾದ ಅಣ್ಣಾಸಾಹೇಬ ಜೊಲ್ಲೆ 2 ನೇ ಬಾರಿಗೆ ಲೋಕಸಭೆಗೆ ಅಧಿಕ ಮತಗಳ ಅಂತರಗಳಿಂದ ಆಯ್ಕೆಯಾಗುವಂತೆ ಪ್ರಾರ್ಥನೆ ಸಲ್ಲಿಸಿದರು.

Emergency Service

ಈ ವೇಳೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ನಿಲೇಶ ಹತ್ತಿ,ಸಂದೀಪ ಮೋಹಿತೆ, ಜಯವಂತ ಭಾಟಲೆ, ರಾಜು ಗುಂದೇಶಾ,ರವಿ ಕದಂ,ಅಭಿಜಿತ್ ಮುದಕುಡೆ, ಪ್ರಣವ ಮಾನವಿ, ಬಂಡಾ ಘೋರ್ಪಡೆ, ಸೂರಜ್ ಖವರೆ, ವಿಜಯ ಟವಳೆ, ಆಶಾ ಟವಳೆ, ಪ್ರಶಾಂತ ಕೆಸ್ತಿ,ಶ್ರೇಯಸ ಅಮಲೆ,ಶ್ರೀನಿವಾಸ ಚವ್ಹಾಣ, ಮಲ್ಲಿಕಾರ್ಜುನ ಜೋಗಡಿ, ಸಾಯಿನಾಥ ಖೋತ, ರೋಹಿತ ಪಾಟೀಲ,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Bottom Add3
Bottom Ad 2