
ಪ್ರಗತಿವಾಹಿನಿ ಸುದ್ದಿ; ಲಾಗೋಸ್: ಮಿಲಿಟರಿ ಕ್ಯಾಂಪ್ ಮತ್ತು ವಸತಿ ಗೃಹ ಪ್ರದೇಶದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದು, 400 ಜನರು ಗಾಯಗೊಂಡಿರುವ ಘಟನೆ ಈಕ್ವಟೋರಿಯಲ್ ನಲ್ಲಿ ಸಂಭವಿಸಿದೆ.
ಮಿಲಿಟರಿ ಕ್ಯಾಂಪ್ ಹಾಗೂ ವಸತಿ ಪ್ರದೇಶದಲ್ಲಿ ಸುಮಾರು ನಾಲ್ಕು ಸ್ಫೋಟಕಗಳು ಸ್ಫೋಟಗೊಂಡಿವೆ. ಘಟನೆಯಲ್ಲಿ ಬಾಟಾದ ಎನ್ ಕೋವಾ ಎನ್ಟೋಮಾ ಶಿಬಿರದ ಸುತ್ತಲಿನ ಕಟ್ಟಡಗಳು ಸುಟ್ಟುಕರಕಲಾಗಿವೆ. ಹಲವಾರು ಕಟ್ಟಡಗಳು, ಮನೆಗಳು ನೆಲಸಮಗೊಂಡಿದ್ದು, ಆಗಸದೆತ್ತರಕ್ಕೆ ಕಪ್ಪು ಹೊಗೆ ಆವರಿಸಿದೆ.