ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಬೆಳಗಾವಿ ನಗರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ (ನಿ) ಮತ್ತು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ವತಿಯಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಶಾಸಕ ಅನಿಲ ಬೆನಕೆ ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಭಾರತೀಯ ಸಂಸ್ಕೃತಿಯ ಪ್ರಕಾರ ನಾವು ನಮ್ಮ ದನಕರುಗಳಿಗೆ ಗೋ ಮಾತಾ ಎಂದು ಪೂಜಿಸುತ್ತಾ ಬಂದಿದ್ದು, ಅದಕ್ಕೆ ತಾಯಿಯ ಸ್ಥಾನವನ್ನು ಕೊಟ್ಟಿದ್ದೇವೆ. ಹಾಗೂ ಅದು ನಮಗೆ ಪೂಜನೀಯ ಎಂದರು.
ಕಾಲುಬಾಯಿ ರೋಗವನ್ನು ತಡೆಗಟ್ಟಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಎಲ್ಲ ಸಾರ್ವಜನಿಕರು ದನ ಕರುಗಳಿಗೆ, ಹಸುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಕಾಲುಬಾಯಿ ಲಸಿಕೆಯನ್ನು ಹಾಕಿಸಿ ಜಾನುವಾರುಗಳನ್ನು ಕಾಲುಬಾಯಿ ರೋಗದಿಂದ ಮುಕ್ತವನ್ನಾಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ, ಉಪ ನಿರ್ದೇಶಕರಾದ ಡಾ. ಅಶೋಕ ಕೊಳ್ಳ, ಸಹಾಯಕ ನಿರ್ದೇಶಕರಾದ ಡಾ.ಶ್ರೀಕಾಂತ ಗಾವಿ, ಜಿಲ್ಲಾ ನೋಡಲ್ ಅಧಿಕರಿಗಳಾದ ಡಾ. ಹೆಚ್. ವಾಯ್. ಯರಗಟ್ಟಿ, ತಾಲೂಕಿನ ಎಲ್ಲ ಪಶು ವೈದ್ಯಾಧಿಕಾರಿಗಳು, ಕೆ.ಎಮ್.ಎಫ್ ಪ್ರತಿನಿಧಿಗಳಾದ ಡಾ. ವಿ.ಕೆ. ಜೋಶಿ, ಡಾ. ಭಾಗ್ಯಶ್ರೀ ಹಾಗೂ ಇತರ ಸ್ಥಳೀಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ