Kannada NewsKarnataka NewsLatest

ಶಾಸಕ ಅನಿಲ ಬೆನಕೆಗೆ ಕಾಂಗ್ರೆಸ್ ನಲ್ಲಿ “ಸೀಟ್” ಇಲ್ಲಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟಿಕೆಟ್ ವಂಚಿತರಾಗಿರುವ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಸೇರ್ಪಡೆಗೆ ಕಾಂಗ್ರೆಸ್ ನೋ ಎಂದಿದೆ.

ಪ್ರಗತಿವಾಹಿನಿಗೆ ದೊರಕಿರುವ ಮಾಹಿತಿ ಪ್ರಕಾರ ಬಿಜೆಪಿ ಟಿಕೆಟ್ ತಪ್ಪುತ್ತಿದ್ದಂತೆ ಅನಿಲ ಬೆನಕೆ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿದ್ದಾರೆ. ಉತ್ತರದ ಟಿಕೆಟ್ ನೀಡುವಂತೆ ಕೋರಿದ್ದಾರೆ. ಆದರೆ ಅಲ್ಪಸಂಖ್ಯಾತರಿಗೆಂದು ಪಕ್ಷ ಮೀಸಲಿಟ್ಟಿರುವ ಬೆಳಗಾವಿ ಉತ್ತರ ಕ್ಷೇತ್ರದ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಬೆಳಗಾವಿ ಜಿಲ್ಲೆಯ 18ರಲ್ಲಿ ಒಂದು ಕ್ಷೇತ್ರವನ್ನು ಅಲ್ಪಸಂಖ್ಯಾತರಿಗೆ ಕೊಡಲೇಬೇಕಾಗಿದೆ. ಇದು ಪಕ್ಷದ ಬದ್ಧತೆ. ಹಾಗಾಗಿ ಅದನ್ನು ತಪ್ಪಿಸಿ ಕೊಡಲು ಅವಕಾಶವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಅನಿಲ ಬೆನಕೆ ಕೋರಿಕೆಯನ್ನು ತಿರಸ್ಕರಿಸಿದೆ ಎಂದು ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಅನಿಲ ಬೆನಕೆಯವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

Home add -Advt
https://pragati.taskdun.com/belgaum-five-candidates-fixed-countdown-to-congress-3rd-list/
https://pragati.taskdun.com/it-will-rain-for-five-days-from-today-in-different-parts-of-the-state/

Related Articles

Back to top button