Belagavi NewsKannada NewsKarnataka NewsPolitics

*ಗುಂಡಿ ಮುಕ್ತ ಬೆಳಗಾವಿಗೆ ಶಾಸಕ ಅಸೀಫ್ ಸೇಠ್ ಕರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಶಾಸಕ ಆಸಿಫ್ (ರಾಜು) ಸೇಠ್ ಅವರು “Pothole-Free Belagavi” ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ ಆಸಿಫ್ (ರಾಜು) ಸೇಠ್ ಅವರು, ಕ್ಷೇತ್ರದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಹಾಗೂ ಸುರಕ್ಷತಾ ಸಮಸ್ಯೆಗಳ ಕುರಿತು ನಿವಾಸಿಗಳು ನಿರಂತರವಾಗಿ ತಮ್ಮ ಗಮನಕ್ಕೆ ತರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Home add -Advt

ಕ್ಷೇತ್ರದಾದ್ಯಂತ ವರ್ಷವಿಡೀ ನಡೆದಿರುವ L&T ಕಾಮಗಾರಿಗಳು ಹಾಗೂ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ UGD ಕಾಮಗಾರಿಗಳಿಂದ ಕೆಲವು ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಿ, ರಸ್ತೆಗಳ ಪುನರ್‌ಸ್ಥಾಪನೆ ಕಾರ್ಯವನ್ನು ಯಾವುದೇ ವಿಳಂಬವಿಲ್ಲದೆ ಕೈಗೊಳ್ಳುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಗಡುವು ನೀಡಲಾಗಿದೆ ಎಂದು ಅವರು ಹೇಳಿದರು.

ರಸ್ತೆ ಗುಂಡಿಗಳ ಸಮಸ್ಯೆಯನ್ನು ಸ್ಥಳದಲ್ಲೇ ಗುರುತಿಸಿ ಪರಿಹರಿಸುವ ಉದ್ದೇಶದಿಂದ “Pothole-Free Belagavi” ಅಭಿಯಾನದಡಿ ವಿಶೇಷ ತಂಡವನ್ನು ರಚಿಸಲಾಗಿದೆ. 

ಸಾರ್ವಜನಿಕರಿಂದ ಬರುವ ದೂರುಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಕ್ಷೇತ್ರದ ನಿವಾಸಿಗಳು ರಸ್ತೆ ಗುಂಡಿ ಕಂಡುಬಂದಲ್ಲಿ ಫೋಟೋ ಅಥವಾ ವಿಡಿಯೋ ಜೊತೆಗೆ ನಿಖರ ಸ್ಥಳದ ಮಾಹಿತಿಯನ್ನು  ವಾಟ್ಸ್ಆಪ್ ಸಂಖ್ಯೆ 8722559561,  9035786518 ಗೆ ಕಳುಹಿಸಬಹುದಾಗಿದೆ.

ಸಾರ್ವಜನಿಕರು ತಮ್ಮ ಪ್ರದೇಶದಲ್ಲಿರುವ ರಸ್ತೆ ಗುಂಡಿಗಳ ಕುರಿತು ಮಾಹಿತಿ ನೀಡುವ ಮೂಲಕ ಈ ಅಭಿಯಾನಕ್ಕೆ ಸಹಕರಿಸುವಂತೆ ಶಾಸಕ ಆಸಿಫ್ (ರಾಜು) ಸೇಠ್ ಮನವಿ ಮಾಡಿದ್ದಾರೆ.

“ಒಟ್ಟಾಗಿ ಕೆಲಸ ಮಾಡುವ ಮೂಲಕ ಬೆಳಗಾವಿಯನ್ನು ಸುರಕ್ಷಿತ, ಸುಗಮ ಹಾಗೂ ರಸ್ತೆ ಗುಂಡಿಗಳ ಮುಕ್ತ ನಗರವನ್ನಾಗಿ ಮಾಡೋಣ,” ಎಂದು ಶಾಸಕ ಆಸಿಫ್ (ರಾಜು) ಸೇಠ್ ತಿಳಿಸಿದ್ದಾರೆ.

Related Articles

Back to top button