Kannada NewsKarnataka News
ಯೋಧನ ಮೃತದೇಹ ತರಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಶಾಸಕ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಜಮ್ಮು ಕಾಶ್ಮೀರದಲ್ಲಿ ಮೃತನಾದ ಯೋಧನ ಮೃತ ದೇಹವನ್ನು ಅವರ ಹುಟ್ಟೂರಿಗೆ ತರಿಸಿದ ಶಾಸಕ ಗಣೇಶ ಹುಕ್ಕೇರಿ, ಯೋಧನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಸುತ್ತಿದ್ದ ಚಂದೂರಟೇಕ ಗ್ರಾಮದ ನಿವಾಸಿ ಶಿವಾನಂದ ಮಲ್ಲಿಕಾರ್ಜುನ ಮಗದುಮ್ಮ ಜಮ್ಮು ಕಾಶ್ಮೀರ ರಾಜ್ಯದ ರಾಯಪುರ ಸತ್ವಾರಿಯಲ್ಲಿ ಸೇವಾ ಸಂದರ್ಭದಲ್ಲಿ ನಿಧನರಾಗಿದ್ದಾರೆ.
ಇವರ ಮೃತ ದೇಹವು ಮಹಾರಾಷ್ಟ್ರದ ಪುಣಾದವರೆಗೆ ಬಂದಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಅಲ್ಲಿಂದ ಮೃತ ದೇಹವನ್ನು ಯೋಧನ ಹುಟ್ಟೂರಿಗೆ ತರುವುದು ಕಷ್ಟವಾಗಿತ್ತು.ಮಧ್ಯಪ್ರವೇಶಿಸಿದ ಶಾಸಕ ಗಣೇಶ ಹುಕ್ಕೇರಿ, ಅಲ್ಲಿನ ಹಾಗೂ ಕರ್ನಾಟಕದ ಅಧಿಕಾರಿಗಳನ್ನು ಪಂಪರ್ಕ ಮಾಡಿ, ಮೃತ ದೇಹವನ್ನು ಚಂದೂರ ಗ್ರಾಮಕ್ಕೆ ತರಿಸಿದರು.
ಜೊತೆಗೆ, ಸ್ವತಃ ಬಂದು ಕುಟುಂಬದವರಿಗೆ ಸಾಂತ್ವನ ಹೇಳಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.




