Latest

ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂ ಭಯಪಡಬೇಕಿಲ್ಲ ಎಂದ ಶಾಸಕ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಬೆಳಗಾವಿ ವಿಚಾರದಲ್ಲಿ ಅಯೋಗ್ಯ ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸುತ್ತೇವೆ. ಹಾಗಂತ ಮುಖ್ಯಮಂತ್ರಿ ಯಡಿಯೂರಪ್ಪನವರು ಮರಾಠ ನಿಗಮ ಹಿಂಪಡೆದರೆ ದೊಡ್ಡ ಅನಾಹುತ ಸಂಭವಿಸುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂ ನಿಗಮ ಹಿಂಪಡೆಯುವ ನಿರ್ಧಾರ ಮಾಡಬಾರದು. ನಾವು ಮೊದಲು ಹಿಂದೂಗಳು. ನಮ್ಮನ್ನು ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ನೀಡಬೇಕು ಎಂದರು.

Home add -Advt

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕರ್ನಾಟಕ ಬಂದ್ ಎಚ್ಚರಿಕೆ ನೀಡಿರುವ ರೋಲ್ ಕಾಲ್ ಹೋರಾಟಗಾರರ ಬೆದರಿಕೆಗೆ ಸಿಎಂ ಹೆದರಬಾರದು ಎಂದು ಹೇಳಿದ್ದಾರೆ.

Related Articles

Back to top button