Latest

ಶಾಸಕರ ಕೊಠಡಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾದ ಮಹಿಳಾಧಿಕಾರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಸಕರ ಕೊಠಡಿಗೆ ಆಗಮಿಸಿದ ಮಹಿಳಾಧಿಕಾರಿಯೊಬ್ಬರು ತನಗೆ ಅನ್ಯಾಯವಾಗಿದೆ ಎಂದು ಗಲಾಟೆ ಮಾಡಿ ನೇಣುಬಿಗಿದುಕೊಳ್ಳಲು ಮುಂದಾದ ಘಟನೆ ವಿಧಾನಸೌಧದಲ್ಲಿ ನಡೆದಿದೆ.

ಶಾಸಕರ ಕೊಠಡಿಗೆ ಏಕಾಏಕಿ ಬಂದ ಮಹಿಳಾಧಿಕಾರಿಯೊಬ್ಬರು ನನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ಗದ್ದಲ ಆರಂಭಿಸಿದ್ದಾರೆ. ನನಗೆ ನ್ಯಾಯಸಿಗುವುದಿಲ್ಲ ಎಂದಾದರೆ ನಿಮ್ಮ ಕೊಠಡಿಯಲ್ಲಿಯೇ ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಹೇಳಿ ಶಾಸಕರ ಕೊಠಡಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Home add -Advt

ಕಂಗಾಲದ ಶಾಸಕರು ಭದ್ರತಾ ಸಿಬ್ಬಂದಿಗಳನ್ನು ಕೂಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಭದ್ರತಾ ಸಿಬ್ಬಂದಿಗಳು ಬಾಗಿಲು ಮುರಿದು ಮಹಿಳೆಯನ್ನು ರಕ್ಷಿಸಿದ್ದಾರೆ.

ಶಾಸಕರು ತಮ್ಮ ಕೊಠಡಿಗೆ ಬೀಗ ಹಾಕಿ ತಕ್ಷಣ ವಿಧಾನಸೌಧದಿಂದ ತೆರಳಿದ್ದಾರೆ. ಮಹಿಳೆಯನ್ನು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಕಲುಷಿತ ಕುಡಿಯುವ ನೀರು ಸೇವಿಸಿ ಮೂವರ ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Related Articles

Back to top button