
ಪ್ರಗತಿವಾಹಿನಿ ಸುದ್ದಿ: ಕೊಪ್ಪಳ ಜಿಲ್ಲೆ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಆಪ್ತ ಸಹಾಯಕ ಚಂದ್ರು ವಡಗೇರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಚಂದ್ರು ವಡಗೇರಿ(46) ಮೃತರು. ಕಳೆದ 20 ವರ್ಷಗಳಿಂದ ಶಾಸಕ ದೊಡ್ಡನಗೌಡ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಏಕಾಏಕಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಂದ್ರು ವಡಗೇರಿ ಅವರಿಗೆ ಇತ್ತೀಚೆಗೆ ಸಣ್ಣ ಕರುಳಿನ ಆಪರೇಷನ್ ಆಗಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಇದೀಗ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.