ವೃದ್ಧ ದಂಪತಿ ಮನೆಗೆ ಅನಿರೀಕ್ಷಿತ ಭೇಟಿ ನೀಡಿ ಖುಷಿಯ ಶಾಕ್ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ದಂಪತಿಯ ಕಣ್ಣಲ್ಲಿ ಆನಂದ ಭಾಷ್ಪ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಮೇಲೆ ಅಪಾರ ಅಭಿಮಾನ ಹೊಂದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳ ಗ್ರಾಮದ ವಯೋವೃದ್ಧ ದಂಪತಿಯನ್ನು ಲಕ್ಷ್ಮೀ ಹೆಬ್ಬಾಳಕರ್ ಅವರು ಅಚಾನಕ್ಕಾಗಿ ಅವರ ಮನೆಗೇ ತೆರಳಿ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು.
ಮನೆಯ ಹಿರಿಯ ಮಗಳಂತೆ ಬಂದ ಶಾಸಕರ ಮೇಲೆ ದಂಪತಿ ತೋರಿದ ವಾತ್ಸಲ್ಯ, ಹೃದಯಸ್ಪರ್ಷಿ ಕ್ಷಣಕ್ಕೆ ಸಾಕ್ಷಿಯಾಯಿತು.
ತಾರಿಹಾಳದ ವೃದ್ಧ ದಂಪತಿ ಬಾಳಪ್ಪ ನಿಂಗಪ್ಪ ಜೋಗಣ್ಣವರ ಹಾಗೂ ಅವರ ಧರ್ಮಪತ್ನಿ ನಿಂಗವ್ವ ಬಾಳಪ್ಪ ಜೋಗಣ್ಣವರ, ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಮೇಲೆ ಅಪಾರ ಅಭಿಮಾನ ಹೊಂದಿರುವ ಇವರು ಶಾಸಕರನ್ನು ಭೇಟಿ ಮಾಡುವ ಇಚ್ಛೆ ಹೊಂದಿದ್ದರು. ಈ ವಿಷಯ ತಿಳಿದ ತಕ್ಷಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸ್ವತಃ ತಾರಿಹಾಳದ ವಯೋವೃದ್ಧ ದಂಪತಿಯ ಮನೆಗೆ ತೆರಳಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಲು ಸ್ವತಃ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಮನೆಗೆ ಆಗಮಿಸಿದ್ದನ್ನು ಕಂಡು ಬಾಳಪ್ಪ ಮತ್ತು ನಿಂಗವ್ವ ದಂಪತಿಯ ಕಣ್ಣಲ್ಲಿ ಆನಂದ ಬಾಷ್ಪ ಸುರಿದವು. ತಮ್ಮನ್ನು ಮನೆಯ ಹಿರಿಯ ಮಗಳಂತೆ ಕಂಡ ವೃದ್ಧ ದಂಪತಿಯ ಪ್ರೀತಿ ವಾತ್ಸಲ್ಯದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾವುಕರಾದರು.
ಈ ಹಿರಿಯ ಜೀವಿಗಳು ತೋರಿದ ಅಕ್ಕರೆ, ಪ್ರೋತ್ಸಾಹ, ವಿಶ್ವಾಸ ಕಂಡು ಶಾಸಕರ ಮನಸ್ಸು ತುಂಬಿಬಂದಿತು. ಶಾಸಕರು ಹಿರಿಯ ಜೀವಿಗಳ ಆಶೀರ್ವಾದ ಪಡೆದು ಧನ್ಯತಾಭಾವ ವ್ಯಕ್ತಪಡಿಸಿದರು. ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವ ಜನಪ್ರತಿನಿಧಿಗಳ ಮೇಲೆ ಜನಸಾಮಾನ್ಯರು ಎಷ್ಟೊಂದು ಅನುಬಂಧ ಹೊಂದುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಯಿತು.
ಇಂತಹ ಒಂದು ಅಭಿಮಾನಕ್ಕೆ, ಸಂಬಂಧಕ್ಕೆ ಯಾವ ಬೆಲೆ ಕಟ್ಟಲು ಸಾಧ್ಯವಿಲ್ಲ, ಇಂಥಹ ಪ್ರೀತಿ, ವಿಶ್ವಾಸ ಜಾತಿ ಭಾಷೆಯ ಗಡಿ ಮೀರಿದ್ದು ಮಾನವತ್ವದಿಂದ ಹೊರಹೊಮ್ಮುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಮೌಲ್ಯಗಳು ಜೀವಂತವಾಗಿರುವುದಕ್ಕೆ ಈ ಹಿರಿಯ ಜೀವಿಗಳೇ ಜ್ವಲಂತ ಉದಾಹರಣೆ ಎಂದು ಶಾಸಕಿ ಭಾವುಕರಾಗಿ ನುಡಿದರು.
ಈ ಹಿರಿಯ ಜೀವಿಗಳ ಅಭಿಮಾನಕ್ಕೆ ನನ್ನ ಹೃದಯಸ್ಪರ್ಶಿ ಶಿರಸಾಷ್ಟಾಂಗ ನಮಸ್ಕಾರಗಳು. ಇವರಿಬ್ಬರೂ ಶತಾಯುಷಿಗಳಾಗಲಿ, ಭಗವಂತ ಇವರಿಗೆ ಹೆಚ್ಚಿನ ಆರೋಗ್ಯ ಭಾಗ್ಯವನ್ನು ಕರುಣಿಸಲೆಂದು ಪ್ರಾರ್ಥಿಸಿ, ಅವರ ಅಭಿಮಾನಕ್ಕೆ ನಾನು ಸದಾಕಾಲ ಋಣಿಯಾಗಿರ್ತಿನಿ, ನಿಮ್ಮ ಪ್ರೀತಿ, ಪ್ರೋತ್ಸಾಹ, ವಿಶ್ವಾಸಕ್ಕೆ ನಿಮ್ಮ ಮನೆಯ ಮಗಳಾಗಿ ನಿಮಗೆಂದು ಅಭಿಮಾನ ತರುವಂತ ಕೆಲಸ ಮಾಡ್ತಿನಿ.
-ಲಕ್ಷ್ಮಿ ಹೆಬ್ಬಾಳಕರ್, ಶಾಸಕಿ
ಗೋವಾದಲ್ಲಿನ ಚುನಾವಣೆ ಕಣ ಚಿತ್ರಣವನ್ನೇ ಬದಲಿಸಿದ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ