Latest

ಬಟ್ಟೆ ನೂರು ತರ್ತೀನಿ…ಕಣ್ಣು, ಕೈ-ಕಾಲು ಹೋಗಿದ್ರೆ ಏನು ಗತಿ?; ಶಾಸಕ ಎಂ.ಪಿ.ಕುಮಾರಸ್ವಾಮಿ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಆನೆ ದಾಳಿಯಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು ಶಾಕರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಕುಮಾರಸ್ವಾಮಿ, ಇದು ಆನೆ ದಾಳಿ ಪ್ರಕರಣವಲ್ಲ. ರಾಜಕೀಯ ಪ್ರೇರಿತ ಹಲ್ಲೆ. ನಾನು ಚುನಾವಣೆಗೆ ನಿಲ್ಲಬಾರದು ಎಂದು ನನ್ನ ವಿರುದ್ಧ ಸಂಚು ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ನಾನು ಒಂದೇ ಒಂದು ಮಾತನಾಡಿಲ್ಲ ಆದರೂ ನನ್ನ ವಿರುದ್ಧ ಸಂಚು ಮಾಡಿ ಹಲ್ಲೆ ನಡೆಸಲಾಗಿದೆ. ನನಗೆ ಗ್ರಾಮಸ್ಥರು ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿಕೊಂಡು ಬಂದು ಹೊಡೆದಿದ್ದಾರೆ. ನಾನೇ ಓಡಿ ಬಂದು ಕಾರಿನಲ್ಲಿ ಕುಳಿತುಕೊಂಡೆ. ಕಾರಿನ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ನನ್ನನ್ನು ಮಾತ್ರವಲ್ಲ ಪೊಲೀಸರ ಮೇಲೂ ಹಲ್ಲೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಎಲ್ಲಾ ಶಾಸಕರಿಗೂ ಭದ್ರತೆ ನೀಡಬೇಕು. ನಿನ್ನೆ ನನ್ನ ಮೇಲೆ ನಡೆದಿದ್ದು ರಾಜಕೀಯ ದಾಳಿ. ಬಟ್ಟೆಯನ್ನೂ ಹರಿದು ಹಾಕಿದ್ದಾರೆ. ಬಟ್ಟೆ ನೂರು ತರ್ತೀನಿ, ಕಣ್ಣು, ಕೈ-ಕಾಲು ಹೋಗಿದ್ರೆ? ಏನು ಗತಿ? ತಪ್ಪಿಸಲು ಬಂದ ಪೊಲೀಸರಿಗೂ ಹೊಡೆದಿದ್ದಾರೆ. ರಾಜ್ಯ ಸರ್ಕಾರ ಮೊದಲು ಭದ್ರತೆ ನೀಡಲಿ ಎಂದು ಆಗ್ರಹಿಸಿದ್ದಾರೆ.

Home add -Advt

ಅಭ್ಯರ್ಥಿ ಘೋಷಣೆ ಮಾಡಲು ಸಿದ್ದರಾಮಯ್ಯಗೂ ಅಧಿಕಾರವಿಲ್ಲ; ಡಿ.ಕೆ.ಶಿವಕುಮಾರ್

https://pragati.taskdun.com/d-k-shivakumarreactioncongresss-candidates-list/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button