Karnataka NewsLatest

*ಶಾಸಕರ ನಕಲಿ ಸಹಿ, ಲೆಟರ್ ಹೆಡ್ ಸೃಷ್ಟಿಸಿ ಪತ್ನಿಗೆ ಕೆಲಸ ಕೊಡಿಸಿದ್ದ ಭೂಪ: ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಶಾಸಕರ ಹೆಸರಲ್ಲಿ ನಕಲಿ ಸಹಿ ಮಾಡಿ, ನಕಲಿ ಲೆಟರ್ ಹೆಡ್ ಸೃಷ್ಟಿಸಿ ವಿಧನಸೌಧದ ಸಚಿವಾಲಯದಲ್ಲಿ ಪತ್ನಿಗೆ ಕೆಲಸ ಕೊಡಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt

ರಾಮನಗರದ ಸ್ವಾಮಿ (35) ಹಾಗೂ ಅಂಜನ್ ಕುಮಾರ್ (25) ಬಂಧಿತ ಆರೋಪಿಗಳು. ಸ್ವಾಮಿ ಎಂಬಾತ ಮೊದಲು ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ನಂತರ ಕೆಲಸ ಬಿಟ್ಟು ರಾಜಕಾರಣಿಗಳ ಜೊತೆ ಓಡಾಡುತ್ತಿದ್ದ. ಹೀಗೆ ಶಾಸಕರನ್ನು ಪರುಇಚಯಿಸಿಕೊಂಡಿದ್ದ ಸ್ವಾಮಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಕಲಿ ಲೆಟರ್ ಹೆಡ್ ಸೃಷ್ಟಿಸಿ, ನಕಲಿ ಸಹಿ ಮಾಡಿ ವಿಧಾನಸೌಧ ಸಚಿವಾಲಯಕ್ಕೆ ಪತ್ರ ಬರೆದು ಪತ್ನಿ ವಿನುತಾ ಹಾಗೂ ಅಂಜನ್ ಎಂಬುವವರಿಗೆ ಶಸಕರ ಆಪ್ತ ಸಹಾಯಕ ಹುದ್ದೆ ಕೊಡಿಸಿದ್ದ.

ವಿನುತಾಳಿಗೆ 2023ರ ಮೇನಲ್ಲಿ ಕೆಲಸ ನೀಡಲಾಗಿತ್ತು. ಆದರೆ ವಿನುತಾ ಕೆಲಸಕ್ಕೆ ಬರದೇ ತಿಂಗಳಿಗೆ 30 ಸಾವಿರ ಸಂಬಳ ಪಡೆದಿದ್ದಾಳೆ. ಪರಿಶೀಲಿಸಲು ತಾನು ಗರ್ಭಿಣಿಯಾಗಿರುವುದರಿಂದ ಕೆಲಸದಿಂದ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದಳು. ಅನುಮಾನಗೊಂಡು ವಿಚಾರಣೆ ನದೆಸಿದಾಗ ನಕಲಿ ಸಹಿ, ನಕಲಿ ಲೆಟರೆಡ್ ಪ್ರಕರಣ ಬೆಳಕಿಗೆ ಬಂದಿದೆ.

ಶಾಸಕ ರಘು ಹೆಸರಲ್ಲಿಯೂ ಸ್ವಾಮಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ ಅಂಜನ್ ಕುಮಾರ್ ಎಂಬಾತನಿಗೆ ಕೆಲಸ ಕೊಡಿಸಿದ್ದ. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ವಿನುತಾಳಿಗೆ ನೋಟಿಸ್ ನೀಡಲಾಗಿದೆ.


Related Articles

Back to top button