Kannada NewsKarnataka NewsNational

*ಅಮೇರಿಕಾದಲ್ಲಿ ಭಾರತೀಯ ಮೂಲದ ವೈದ್ಯನ ಕೊಲೆ*

ಪ್ರಗತಿವಾಹಿನಿ ಸುದ್ದಿ: ಅಮೇರಿಕಾದ ಅಲಬಾಮಾದ ಟಸ್ಕಲೂಸಾ ನಗರದಲ್ಲಿ ಶುಕ್ರವಾರ ಭಾರತೀಯ ಮೂಲದ ವೈದ್ಯ ಡಾ ರಮೇಶ್ ಬಾಬು ಪೆರಮಶೆಟ್ಟಿ ಎಂಬುವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. 

ಡಾ. ರಮೇಶ್ ಅಮೆರಿಕದಲ್ಲಿ ಪ್ರಸಿದ್ಧ ವೈದ್ಯರಾಗಿದ್ದು, ಹಲವಾರು ಆಸ್ಪತ್ರೆಗಳನ್ನು ನಿರ್ವಹಿಸುತ್ತಿದ್ದರು. ವೈದ್ಯ ರಮೇಶ್ ಆಂಧ್ರಪ್ರದೇಶದ ತಿರುಪತಿ ಮೂಲದವರಾಗಿದ್ದಾರೆ. ರಮೇಶ್ ಕ್ರಿಮ್ಪನ್ ನೆಟ್‌ವರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ವೈದ್ಯಕೀಯ ಅಧಿಕಾರಿಗಳ ಗುಂಪಿನ ನಿರ್ದೇಶಕರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Home add -Advt

ಡಾ ಪೆರಮಶೆಟ್ಟಿ 1986 ರಲ್ಲಿ ವಿಸ್ಕಾನ್ಸಿನ್‌ನ ವೈದ್ಯಕೀಯ ಕಾಲೇಜಿನ ಹಾಗೂ ಶ್ರೀ ವೆಂಕಟೇಶ್ವರ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದರು. ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ 38 ವರ್ಷಗಳ ಅನುಭವವಿತ್ತು.

Related Articles

Back to top button