ಪ್ರಗತಿವಾಹಿನಿ ಸುದ್ದಿ: ಇನ್ಮುಂದೆ ಟ್ರೂಕಾಲರ್ ಸಹಾಯವಿಲ್ಲದೆಯೇ ಕರೆ ಮಾಡಿದವರ ಹೆಸರು ಕಾಣುವಂತಹ ಸೌಲಭ್ಯ ಮೊಬೈಲ್ ನಲ್ಲಿ ಬರಲಿದೆ.
ಅದೆಷ್ಟೋ ಬಾರಿ ಸ್ಪ್ಯಾಮ್ ಕರೆಗಳಿಂದಾಗಿ ಅನ್ನೌನ್ ನಂಬರ್ ಗಳಿಂದ ಕರೆ ಬರುವುದನ್ನು ತಿಳಿಯಲು ಟ್ರೂಕಾಲರ್ ಅಪ್ಲಿಕೇಷನ್ ಅಳವಡಿಸಿಕೊಳ್ಳಲಾಗುತ್ತಿತ್ತು. ಆದರೆ ಈ ಟ್ರೂಕಾಲರ್ ಅಷ್ಟು ಸುರಕ್ಷಿತವಲ್ಲ. ಬಳಕೆದಾರರ ಮಾಹಿತಿ ಸೋರಿಕೆಯಾಗುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ-ಟ್ರಾಯ್ ಮಹತ್ವದ ನಿರ್ಧರ ಕೈಗೊಂಡಿದೆ.
ಟ್ರೂಕಾಲರ್ ಇಲ್ಲದೆಯೂ ಯಾರು ಕರೆ ಮಾಡಿದ್ದಾರೆ ಎಂಬುದನ್ನು ಬಳಕೆದಾರರಿಗೆ ಕಾಣುವಂತೆ ಮೊಬೈಲ್ ನಲ್ಲಿ ಸೌಲಭ್ಯ ಕಲ್ಪಿಸಲು ಟೆಲಿಕಾಂ ಆಪರೇಟರ್ ಗಳಿಗೆ ಸೂಚಿಸಿದೆ. ಗ್ರಾಹಕರ ಕೋರಿಕೆ ಮೇರೆಗೆ ಟೆಲಿಕಾಅಂ ಕಂಪನಿಗಳು ಕರೆ ಮಾಡುವವರ ಹೆಸರಿನ ಪ್ರಸ್ತುತಿಯನ್ನು ಪೂರಕ ಸೇವೆಯಾಗಿ ಒದಗಿಸಬೇಕು ಎಂದು ಟ್ರಾಯ್ ಪ್ರಸ್ತಾಪಿಸಿದೆ.
ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಟ್ರೂಕಾಲ್ ಹೊರತಾಗಿ ಹಾಗೂ ಮೊಬೈಲ್ ನಲ್ಲಿ ಸೇವ್ ಆಗಿರದ ನಂಬರ್ ಗಳಿಂದ ಕರೆ ಬಂದರು ಕೂಡ ಹೆಸರು ಡಿಸ್ ಪ್ಲೇ ಆಗಲಿದೆ. ಭಾರತದಲ್ಲಿ ಡಿಫಾಲ್ಟ್ ಆಗಿ ಕಾಲರ್ ಐಡಿ ಸೇವೆ ಲಭ್ಯವಾಗಲಿದೆ. ಇದರಿಂದ ಗ್ರಾಮಹಕರು ಸಿಮ್ ಖರೀದಿಸುವಾಗ ಯಾವ ಹೆಸರನ್ನು ನೋಂದಣಿ ಮಾಡುತ್ತಾರೆ ಅದೇ ಹೆಸರು ಕರೆ ಬಂದಾಗ ಮೊಬೈಲ್ ಪರದೆ ಮೇಲೆ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ