ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಮಾರುತಿಗಲ್ಲಿಯ ಶ್ರೀ ಮಾರುತಿ ಮಂದಿರದಲ್ಲಿ 700ಕ್ಕೂ ಅಧಿಕ ತರುಣರು ಹನುಮಾನ ಚಾಲೀಸಾ ಹೇಳಿ ಹನುಮಮಾಲಾ ಧಾರಣೆ ಮಾಡಿದರು.
ಬಜರಂಗದಳದ ಜಿಲ್ಲಾ ಸಂಯೋಜಕ ಭಾವುಕಣ್ಣ ಲೋಹಾರ, ಸಹ ಸಂಯೋಜಕ ಸುನೀಲ ಗೌರಣ್ಣ ,ನಗರ ಬಜರಂಗದಳದ ಸಂಯೋಜಕ ಆದಿನಾಥ ಗಾವಡೆ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
ಮಾಲಾಧಾರಿಗಳು ಕಪಿಲೇಶ್ವರ ಮಂದಿರದ ತನಕ ‘ಶ್ರೀರಾಮ ಜೈ ರಾಮ ಜೈ ಜೈ ರಾಮ’ ತಾರಕ ಮಂತ್ರದೊಂದಿಗೆ ಸಂಕೀರ್ತನ ಯಾತ್ರೆ ಕೈಗೊಂಡು ಸಂಜೆ ಹೊರಟು ನಾಳೆ ಹನುಮನ ಜನ್ಮಸ್ಥಳವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತ ತಲುಪಲಿದ್ದಾರೆ.
ಸುಮಾರು 60 ಸಾವಿರಕ್ಕೂ ಹೆಚ್ಚಿನ ಹನಮಮಾಲಾಧಾರಿ ಬಜರಂಗದಳದ ಕಾರ್ಯಕರ್ತರ ಸಂಕೀರ್ತನ ಯಾತ್ರೆ, ಹನುಮಾನ ಚಾಲಿಸಾ ಪಠಣದ ನಂತರ ಅಲ್ಲಿ ಮಾಲೆ ವಿಸರ್ಜನೆ ಮಾಡಿ ಮರಳಲಿದ್ದಾರೆ.
ಕರೆಂಟ್ ಶಾಕ್; ಗಾಯಗೊಂಡಿದ್ದ ಬಾಲಕ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ