Latest

ಕರೆಂಟ್ ಶಾಕ್; ಗಾಯಗೊಂಡಿದ್ದ ಬಾಲಕ ಸಾವು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಾರಿವಾಳ ಹಿಡಿಯಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಡಿಂಡಿದ್ದ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರಿರುವ ಘಟನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.

ಡಿಸೆಂಬರ್ 1ರಂದು ಬೆಂಗಳೂರಿನ ವಿಜಯಾನಂದ ನಗರದಲ್ಲಿ ಇಬ್ಬರು ಬಾಲಕರು ವಿದ್ಯುತ್ ತಂತಿ ಮೇಲೆ ಕುಳಿತಿದ್ದ ಪಾರಿವಾಳ ಹಿಡಿಯಲು ಹೋಗಿ ಹೈಟೆನ್ಶನ್ ವಿದ್ಯುತ್ ತಂತಿ ಯಿಂದ ಕರೆಂಟ್ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ತೀವ್ರತರವಾದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಇಬ್ಬರು ಬಾಲಕರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Home add -Advt

ಇಬ್ಬರು ಬಾಲಕರಲ್ಲಿ ಇದೀಗ ಗಾಯಾಳು ಸುಪ್ರೀತ್ (12)ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಬಾಲಕಗಿನೆ ಚಿಕಿತ್ಸೆ ಮುಂದುವರೆದಿದೆ.

ಟಿಕ್ ಟಾಕ್ ತಾರೆ ಮೇಘಾ ಠಾಕೂರ್ ಹಠಾತ್ ನಿಧನ

https://pragati.taskdun.com/tiktok-star-megha-thakur-passes-away-in-canada/

 

Related Articles

Back to top button