Karnataka NewsLatestPolitics

*BREAKING: ಮದ್ದೂರಿನಲ್ಲಿ 108 ಗಣೇಶ ಮೂರ್ತಿ ಮೆರವಣಿಗೆಗೆ ಆರ್.ಅಶೋಕ್ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಕಳೆದ ವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಕಲ್ಲು ತೂರಾಟ, ಗಲಾಟೆಯಿಂದ ಹೊತ್ತಿ ಉರಿದಿದ್ದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿಂದು ಬಿಜೆಪಿ ನಾಯಕರು 108 ಗಣೇಶ ಮೂರ್ತಿಗಳ ಭವ್ಯ ಮೆರವಣಿಗೆ ನಡೆಸುತ್ತಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಚಾಲನೆ ನೀಡಿದ್ದಾರೆ.

ಕಳೆದ ವರ್ಷದ ಗಲಾಟೆ ಘಟನೆಯನ್ನೇ ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷ ಬರೋಬ್ಬರಿ 108 ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆಗೆ ಚಾಲನೆ ನೀಡಿವೆ.

Home add -Advt

ಮದ್ದೂರಿನ ಮಳವಳ್ಳಿಯ ಈಶ್ವರ ದೇವಸ್ಥಾನದ ಬಳಿ ವಿಪಕ್ಷ ನಾಯಕ ಆರ್.ಅಶೋಕ್ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ, ಈಡುಗಾಯಿ ಒಡೆದು 108 ಗಣೇಶ ಮೂರ್ತಿಗಳ ಅದ್ಧೂರು ಮೆರವಣಿಗೆಗೆ ಚಾಲನೆ ನೀಡಿದರು. ಇಡೀ ಮದ್ದೂರು ಕೇಸರಿಮಯವಾಗಿದ್ದು, ಬಿಜೆಪಿ ನಾಯಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಆರ್.ಅಶೋಕ್, ಛಲವಾದಿನಾರಾಯಣಸ್ವಾಮಿ, ಸಿ.ಟಿ.ರವಿ ಸೇರಿದಂತೆ ಹಲವು ನಾಯಕರು ಸಾವಿರಾರು ಕಾರ್ಯಕರ್ತರು, ಹಿಂಫ಼್ದೂಪರ ಸಂಘಟನೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.

ರಸ್ತೆಯುದ್ದಕ್ಕೂ ವಾದ್ಯ, ಪಟಾಕಿಸಿಡಿಸಿ ಜಯಘೋಷಗಳನ್ನು ಕೂಗುತ್ತಾ ಸಾಗಿದೆ. ಮಳವಳ್ಳಿ ಈಶ್ವರ ದೇವಸ್ಥಾನದಿಂದ ಆರಂಭವಾಗಿರುವ ಮೆರವಣಿಗೆ ಶಿಂಷಾ ನದಿವರೆಗೂ ಸಾಗಲಿದ್ದು, ಶಿಂಷಾ ನದಿಯಲ್ಲಿ ಸಾಅಮೂಹಿಕ ಗಣೇಶ ವಿಸರ್ಜನೆ ನಡೆಯಲಿದೆ.

ಕಳೆದ ಬಾರಿ ವಿವಾದಕ್ಕೆ ಕಾರಣವಾಗಿದ್ದ ಅದೇ ಸೂಕ್ಷ್ಮ ಪ್ರದೇಶ ಪೇಟೆ ಬೀದಿಯ ಮಸೀದಿ ಪಕ್ಕದಲ್ಲೇ ಈ ಸಾಮೂಹಿಕ ರ‍್ಯಾಲಿ ಸಾಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೈಗೊಂಡಿದ್ದು, ಸೂಕ್ಷ್ಮ ವಲಯಗಳಲ್ಲಿ ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.


Related Articles

Back to top button