Latest

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮಗನನ್ನೇ ಕೊಂದ ಅಮ್ಮ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತನ್ನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ತಾಯಿಯೇ ಮಗನನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಹಲಸೂರು ಬಳಿ ಮರ್ಫಿ ಟೌನ್ ನಲ್ಲಿ ನಡೆದಿದೆ.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿ 16 ವರ್ಷದ ಬಾಲಕ ನಂದು ಕೊಲೆಯಾದ ದುರ್ದೈವಿ. 35 ವರ್ಷದ ಗೀತಾ ಹಾಗೂ ಆಕೆಯ ಪ್ರಿಯಕರ 24 ವರ್ಷದ ಚಾಲಕ ಶಕ್ತಿವೇಲು ಬಂಧಿತ ಆರೋಪಿಗಳು

ಪತಿಯಿಂದ ದೂರವಾಗಿದ್ದ ಗೀತಾಳಿಗೆ ಫೇಸ್ ಬುಕ್ ನಲ್ಲಿ ಶಕ್ತಿವೇಲು ಎಂಬ ಯುವಕನ ಪರಿಚಯವಾಗಿದೆ. ಹೀಗೆ ಆರಂಭವಾದ ಪರಿಚಯವಾದ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಆಗಾಗ ಶಕ್ತಿವೇಲು ಗೀತಾ ಮನೆಗೆ ಬಂದು ಹೋಗುತ್ತಿದ್ದ. ಇದರಿಂದ ಬೇಸತ್ತ ಮಗ ನಂದು ತಾಯಿಯನ್ನು ಪ್ರಶ್ನೆ ಮಾಡಿದ್ದಾನೆ. ಇದೇ ವಿಚಾರವಾಗಿ ತಾಯಿ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇಷ್ಟಾಗ್ಯೂ ಶಕ್ತಿವೇಲು ಮತ್ತೆ ಮನೆಗೆ ಬಂದಿದ್ದ. ಈ ವೇಳೆಯೂ ಮಗ ನಂದು ತಾಯಿಯೊಂದಿಗೆ ಜಗಳವಾಡಿದ್ದ. ಇದರಿಂದ ಕೋಪಗೊಂಡ ಗೀತಾ ಹಾಗೂ ಶಕ್ತಿವೇಲು ಇಬ್ಬರೂ ಸೇರಿ ನಂದುವಿನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಮನಬಂದಂತೆ ಇರಿದು ಕೊಂದಿದ್ದಾರೆ.
ಸಂಜಯ್ ಪಾಟೀಲ್ ಅಣಕು ಶವಯಾತ್ರೆ ನಡೆಸಿದ ದಲಿತ ಸಂಘಟನೆಗಳು

Home add -Advt

Related Articles

Back to top button