Latest

ಹಾಸ್ಟೇಲ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ನರ್ಸಿಂಗ್ ವಿದ್ಯಾರ್ಥಿನಿಯೋರ್ವರು ಕಾಲೇಜು ಹಾಸ್ಟೇಲ್ ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಕದ್ರಿಯಲ್ಲಿ ನಡೆದಿದೆ.

21 ವರ್ಷದ ನೀನಾ ಮೃತ ವಿದ್ಯಾರ್ಥಿನಿ. ಕೇರಳದ ಕಣ್ಣೂರಿನ ಚಿರುಪ್ಪುಳ ಮೂಲದ ನೀನಾ ಕದ್ರಿಯಲ್ಲಿ ನರ್ಸಿಂಗ್ ಓದುತ್ತಿದ್ದರು. ಆದರೆ ಈಗ ಡೆತ್ ನೋಟ್ ಬರೆದಿಟ್ಟು ಹಾಸ್ಟೇಲ್ ನಲ್ಲೇ ನೇಣಿಗೆ ಕೊರಳೊಡ್ಡಿದ್ದಾಳೆ.

Home add -Advt

ಕಾಲೇಜು ಶುಲ್ಕ ಪಾವತಿ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ವಿದ್ಯಾರ್ಥಿನಿ ಬರೆದಿಟ್ಟ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಕಾಲೇಜು ಶುಲ್ಕ ವಿಚಾರವಾಗಿ ಕಾಲೇಜಿನಲ್ಲಿ ಕುರುಕುಳ ನೀಡಲಾಗುತ್ತಿತ್ತು. ತನ್ನ ತಾಯಿಗೆ ಶುಲ್ಕ ಪಾವತಿಸುವುದು ಹೊರೆಯಾಗಿತ್ತು ಎಂದು ಬರೆದಿದ್ದಾಳೆ ಎಂದು ತಿಳಿದುಬಂದಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮಗನನ್ನೇ ಕೊಂದ ಅಮ್ಮ

Related Articles

Back to top button