ಸಂಸದ ಜೊಲ್ಲೆ ಪ್ರಯತ್ನ ಯಶಸ್ವಿ: ಬೆಳಗಾವಿ ಜಿಲ್ಲೆಗೆ ಬಂಪರ್ ಕೊಡುಗೆ ; 941 ಕೋಟಿ ರೂ.ಯೋಜನೆ ಮಂಜೂರು
ಪ್ರಗತಿವಾಹಿನಿ ಸುದ್ದಿ, ನವದೆಹಲಿ : 941.61 ಕೋಟಿ ರೂ ಅಂದಾಜು ವೆಚ್ಚದ ಚಿಕ್ಕೋಡಿ – ಗೋಟೂರು ಹೆದ್ದಾರಿ ಯೋಜನೆಗೆ ಕೇಂದ್ರ ಸರಕಾರ ಮಂಜೂರಿ ನೀಡಿದೆ.
ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಯತ್ನದ ಫಲವಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ.
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಚಿಕ್ಕೋಡಿ ಪಟ್ಟಣದಿಂದ ಗೋಟುರವರೆಗೆ 27 ಕಿ.ಮಿ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಚಿಕ್ಕೋಡಿ ಬೈಪಾಸ್ ಸೇರಿದಂತೆ NH 548 ಚಿಕ್ಕೋಡಿ-ಗೋಟೂರು ರಸ್ತೆಯನ್ನು ನಿರ್ಮಿಸಲು 941.61 ಕೋಟಿ ಮಂಜೂರು ಮಾಡಿದ್ದು, ಅದನ್ನು ಸುಸಜ್ಜಿತ ರಸ್ತೆಯೊಂದಿಗೆ 4 ಲೇನ್ ಹೆದ್ದಾರಿ ರಸ್ತೆಯನ್ನಾಗಿ ಪರಿವರ್ತಿಸಲು 27 ಕಿಮೀ ವ್ಯಾಪ್ತಿಯ ಈ ಯೋಜನೆಯು 2023-24ರ ವಾರ್ಷಿಕ ಯೋಜನೆ ಅಡಿಯಲ್ಲಿ ಪೂರ್ಣಗೊಳ್ಳಲಿದೆ.
ಉತ್ತರ ಕರ್ನಾಟಕಕ್ಕೆ ಸುವರ್ಣ ಚತುಷ್ಪಥದೊಂದಿಗೆ (ಚೆನ್ನೈ-ಮುಂಬೈ, ಅಂದರೆ, NH-48) ನೇರ, ತಡೆರಹಿತ ಸಂಪರ್ಕವನ್ನು ಸ್ಥಾಪಿಸುತ್ತದೆ. ಈ ಪ್ರದೇಶದಲ್ಲಿ ಹೆಚ್ಚಿದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಸುತ್ತಮುತ್ತಲಿನ ಜನರಿಗೆ ಬಹಳ ಅನುಕೂಲವಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯಿಂದ ಸಂಕೇಶ್ವರ – ನಿಪ್ಪಾಣಿ ಮೂಲಕ ಮಹಾರಾಷ್ಟ್ರ ಗಡಿಯವರೆಗೆ 2800 ಕೋಟಿ ರೂ. ಮೊತ್ತದಲ್ಲಿ 6 ಲೈನ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಮಾಂಗೂರ ಕ್ರಾಸ್ ಮತ್ತು ಸೌಂದಲಗಾ ಕ್ರಾಸ್ ಸ್ಥಳಕ್ಕೆ ಓವರ ಬ್ರಿಡ್ಜ್ 6 ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು, ಫ್ಲೈ ಓವರ್ ಬ್ರಿಡ್ಜ್ ಬದಲು (Elevated Road) ಕಾಲಂ ಬ್ರಿಡ್ಜ್ ನಿರ್ಮಿಸಲು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಕಾಲಂ ಬ್ರಿಡ್ಜ್ ನಿಂದ ಸುತ್ತಮುತ್ತಲಿನ 15 ಕ್ಕಿಂತಲೂ ಹೆಚ್ಚಿನ ಗ್ರಾಮದ ಜನರಿಗೆ ಅನುಕೂಲವಾಗಲಿದೆ. ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರನ್ನು ಶುಕ್ರವಾರ ನವದೆಹಲಿಯಲ್ಲಿ ಭೇಟಿ ಮಾಡಿ, ಹೆಚ್ಚಿನ ಹಣ ಮಂಜೂರು ಮಾಡಬೇಕೆಂದು ಮನವಿ ಮಾಡಲಾಯಿತು. ಇದಕ್ಕೆ ನೀತಿನ ಗಡ್ಕರಿ ಜಿ ಅವರು ಸಕಾರತ್ಮಕವಾಗಿ ಸ್ಪಂದಿಸಿ ಹೆಚ್ಚಿನ ಹಣ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು ಎಂದು ಜೊಲ್ಲೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ