Belagavi NewsBelgaum NewsKannada NewsKarnataka NewsPolitics

*ವಿನಯ ನಾವಲಗಟ್ಟಿ ಮನೆಗೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರ ಮನೆಗೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ವಿನಯ ನಾವಲಗಟ್ಟಿ ಅವರ ತಂದೆ, ತಾಯಿ ಆಶೀರ್ವಾದವನ್ನು ಪಡೆದು ಸನ್ಮಾನ ಸ್ವೀಕರಿಸಿದರು. 

ಇದೇ ವೇಳೆ ವಿನಯ ನಾವಲಗಟ್ಟಿ ಕುಟುಂಬಸ್ಥರು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸಿಹಿ ತಿನ್ನಿಸಿ, ಆರತಿ ಬೆಳಗುವ ಮೂಲಕ ರಾಜಕೀಯ ರಂಗದಲ್ಲಿ ಯಶಸ್ಸು ದೊರೆಯಲಿ ಎಂದು ಹರಸಿದರು.

Home add -Advt

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ರಾಜೇಂದ್ರ ಪಾಟೀಲ್, ಸಿದ್ದಿಕ ಅಂಕಲಗಿ, ಬಸವರಾಜ ಶೇಂಗಾವಿ, ಅರ್ಜುನ ನಾಯಕವಾಡಿ, ಮಲಗೌಡ ಪಾಟೀಲ್, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಭರಂಣ್ಣ ತೋಳಿ, ವಿಜಯ ತಳವಾರ, ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಸೇರಿದಂತೆ ಅಪಾರ ಸಂಖ್ಯೆ ಮಹಿಳೆಯರು, ಕಾರ್ಯಕರ್ತರು ಇದ್ದರು.

Related Articles

Back to top button