Latest

ವಿದೇಶಿ ಮದ್ಯ ಎಂದು ಸಮುದ್ರದಲ್ಲಿ ತೇಲಿಬಂದ ಬಾಟಲಿ ಮದ್ಯ ಸೇವನೆ; ಮೂವರ ಸಾವು

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಸಮುದ್ರದ ಅಲೆಯಲ್ಲಿ ತೇಲಿಬಂದ ಬಾಟಲ್ ಗಳಲ್ಲಿ ಇದ್ದುದು ವಿದೇಶಿ ಮದ್ಯ ಎಂದು ಭಾವಿಸಿ ಸೇವಿಸಿದ್ದ ಮೂವರು ಮೀನುಗಾರರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದಿದೆ.

ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದಲ್ಲಿ ಮದ್ಯದ ಬಾಟಲ್ ಗಳು ತೇಲುತ್ತಿರುವುದನ್ನು ನೋಡಿ ಅದನ್ನು ಎತ್ತಿಕೊಂಡು ಕುಡಿದಿದ್ದಾರೆ. ತಕ್ಷಣ ಅಸ್ವಸ್ಥರಾಗಿದ್ದು, ಮೂವರಲ್ಲಿ ಇಬ್ಬರು ಸಮುದ್ರತೀರಕ್ಕೆ ಬರುವಷ್ಟರಲ್ಲೇ ಮೃತಪಟ್ಟಿದ್ದಾರೆ. ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಮೃತರನ್ನು ಅಂಥೋನಿಸ್ವಾಮಿ, ಅರೋಕಿಯಾ ಪ್ರೊಹಿತ್ ಹಾಗೂ ವಿನೋದ್ ಕುಮಾರ್ ಎಂದು ಗುರುತಿಸಲಾಗಿದೆ.

Related Articles

Back to top button