Belagavi NewsBelgaum NewsPolitics

*ಇಡಿ ದಾಳಿಗೂ ಸಿಎಂಗೂ ಸಂಬಂಧವಿಲ್ಲ: ಸಚಿವ ಸತೀಶ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಇಡಿ ದಾಳಿಗೂ ಸಿಎಂಗೂ ಸಂಬಂಧವಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಇಡಿ ದಾಳಿ ಮಾಡಿಲ್ಲ. ಮುಡಾ ಮೇಲೆ ಇಡಿ ದಾಳಿಯಾಗಿದೆ. ಮುಡಾ ಮೇಲಿನ ತನಿಖೆ ಆಗಬೇಕು ಎನ್ನುವದು ನಮ್ಮದು ವಾದವಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಸಿಎಂ ಸಿದ್ದರಾಮಯ್ಯ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ವೇಳೆ ಮುಡಾ ಕಚೇರಿಯಲ್ಲಿ ಕಡತಗಳು ನಾಪತ್ತೆ ವಿಚಾರಕ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇಡಿ ಅವರು ವಿಚಾರಣೆ ಮಾಡುತ್ತಿದ್ದಾರೆ. ಇಡಿ ಅವರು ಏನೂ ಬೇಕೋ ಅದನ್ನ ತನಿಖೆ ಮಾಡುತ್ತಾರೆ.ಎಲ್ಲ ದಾಖಲೆಗಳು ಸರಕಾರದಲ್ಲಿ ಇರುತ್ತವೆ.ಯಾವ ದಾಖಲೆಗಳು ಎಲ್ಲಿ ಹೋಗಲು ಅವಕಾಶವಿಲ್ಲ ಎಂದರು.

ಸಚಿವ ಭೈರತಿ ಸುರೇಶ ಅವರು ಕಡತಗಳನ್ನ ನಾಶ ಮಾಡಿದ್ದಾರೆ ಎನ್ನುವ ಎಚ್ ಡಿ ಕುಮಾರಸ್ವಾಮಿ ಆರೋಪ ವಿಚಾರ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಅದೂ ಸಾಬೀತಾಗಬೇಕು. ಅದು ಇಡಿ ತನಿಖೆಯಿಂದ ಗೊತ್ತಾಗುತ್ತೆ. ಇಡಿ ತನಿಖೆವರೆಗೂ ಕಾಯ್ದು ನೋಡೋಣ ಯಾವುದೇ ಅರ್ಜಂಟ್ ಇಲ್ಲ ಎಂದರು.

Home add -Advt


ಮುಡಾ ವಿಚಾರದಲ್ಲಿ ಯಾವುದೇ ಹಣದ ವ್ಯವಹಾರವಿಲ್ಲದರೂ ಇಡಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ಅದು ಇಡಿ ವ್ಯಾಪ್ತಿಗೆ ಬರುವದಿಲ್ಲ ಎನ್ನುವ ವಾದವಿದೆ‌. ಈ ಬಗ್ಗೆ ಸುಪ್ರೀಂ ಕೋರ್ಟ ಆದೇಶ ಮಾಡಬೇಕು.ಸಿಬಿಐ ಗೆ ಮುಡಾ ವಿಚಾರಣೆ ಹಸ್ತಾಂತರವಾದರೇ ಸಿಎಂ ರಾಜೀನಾಮೆ ನೀಡುತ್ತಾರಾ ಎನ್ನುವ ಪ್ರಶ್ನೆ ಸಿಬಿಐ ತನಿಖೆಯಾದರೂ ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಬರುವದಿಲ್ಲ ಎಂದರು.
ಸರಕಾರಿ ಕಚೇರಿ ಬಿಟ್ಟು ಮಠವೊಂದರಲ್ಲಿ ಕೆಡಿಪಿ ಸಭೆ ಕರೆದ ವಿಚಾರ ಮಾತನಾಡಿದ ಅವರು, ಸ್ಥಳದ ಅಭಾವದಿಂದ ಮಠದಲ್ಲಿ ಎಲ್ಲ ಪಿಡಿಓ ಸಭೆ ಕರೆಯಲಾಗಿದೆ. ಅದರಲ್ಲಿ ವಿಶೇಷವಿಲ್ಲ. ಜಾಗದ ಸಮಸ್ಯೆ ಇರುವದರಿಂದ ಮಠದಲ್ಲೇ ಸಭೆ ಕರೆಯಲಾಗಿದೆ ಹೊರತು ಬೇರೆ ಏನು ಇಲ್ಲ ಎಂದು ಹೇಳಿದರು.

Related Articles

Back to top button