Kannada NewsLatestNational

*ಕಲ್ಲಂಗಡಿ ಹಣ್ಣು ಸೇವಿಸಿದ್ದ ಒಂದೇ ಕುಟುಂಬದ ನಾಲ್ವರು ಸಾವು*

ಪ್ರಗತಿವಾಹಿನಿ ಸುದ್ದಿ: ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Home add -Advt

ಮುಂಬೈನ ವೈಧೋನಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕುಟುಂಬದ ನಾಲ್ವರೂ ಬಿರಿಯಾನಿ ಸೇವಿಸಿದ ಬಳಿಕ ಕಲ್ಲಂಗಡಿ ಹಣ್ಣು ತಿಂದಿದ್ದರು. ಮೃತರನ್ನು ಅಬ್ದುಲ್ಲಾ ದೋಕಾಡಿಯಾ (40) ನಸ್ರಿನ್ ದೊಕಾಡಿಯಾ(35), ಮಕ್ಕಳಾದ ಆಯಿಷಾ (16)ಹಾಗೂ ಜೈನಾಬ್ (13) ಎಂದು ಗುರುತಿಸಲಾಗಿದೆ.

ಸಂಬಂಧಿಕರೆಲ್ಲರೂ ಒಂದೇ ಕಡೆ ಸೇರಿದ್ದರು. ಭರ್ಜರಿ ಭೋಜನ ಮಾಡಿದ್ದರು. ಬಳಿಕ ತಡರಾತ್ರಿ ಎಲ್ಲರೂ ಅವರವರ ಮನೆಗಳಿಗೆ ತೆರಳಿದ್ದಾರೆ. ಮಧ್ಯರಾತ್ರಿ 1ಗಂಟೆಯಿಂದ 1:3 ರ ವೇಳೆ ನಾಲ್ವರು ಕುಟುಂಬ ಸದಸ್ಯರು ಕಲ್ಲಂಗಡಿ ಹಣ್ಣು ತಿಂದಿದ್ದಾರೆ. ಮುಂಜಾನೆ 5:30ರ ಸುಮಾರಿಗೆ ನಾಲ್ವರಿಗೂ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ.

ನಾಲ್ವರೂ ಕುಟುಂಬ ವೈದ್ಯರ ಬಳಿ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದಿದದರೆ. ಬಳಿಕ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಫಲಿಸದೇ ನಾಲ್ವರೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Related Articles

Back to top button