ಪ್ರಗತಿವಾಹಿನಿ ಸುದ್ದಿ; ಮುಂಬೈ: ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 63,099 ಅಂಕಗಳಿಗೆ ತಲುಪಿದ್ದು ಸಾರ್ವಕಾಲಿಕ ದಾಖಲೆ ಬರೆದಿದೆ.
ಮುಂಬೈ ಷೇರುಮಾರುಕಟ್ಟೆ ಸೂಚ್ಯಂಕದಲ್ಲಿ ಸೆನ್ಸೆಕ್ಸ್ ಇಂದು ಹೊಸ ದಾಖಲೆ ಬರೆದಿದೆ. ಬಿ ಎಸ್ ಇ ಸೂಚ್ಯಂಕ ಸೆನ್ಸೆಕ್ಸ್ 417 ಅಂಕಗಳು ಏರಿಕೆಯಾಗಿ 63,099ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ಎನ್ ಎಸ್ ಇ ಸೂಚ್ಯಂಕ ನಿಫ್ಟಿ 140 ಅಂಕಗಳಿಸಿ 18,758ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ.
ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸಾರ್ವಕಾಲಿಕ ಎತ್ತರಕ್ಕೆ ಏರಿದೆ. ಜಾಗತಿಕ ಷೇರು ಮಾರುಕಟ್ಟೆಯ ಮಂದಗತಿಯ ಹೊರತಾಗಿಯೂ ಹೆಚ್ಚಳ ದಾಖಲಿಸಿವೆ.
ನಿಫ್ಟಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಮ್ಮ ಸಾರ್ವಕಾಲಿಕ ಎತ್ತರಕ್ಕಿಂತ ಈಗಲೂ ಕೆಳಗಿದ್ದರೂ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರುಗತಿಯ ಟ್ರೆಂಡ್ ನಲ್ಲಿವೆ
ಯುವಕನಿಗೆ ಡಿಕ್ಕಿ ಹೊಡೆದ ರೈಲು; ಛಿದ್ರ ಛಿದ್ರಗೊಂಡ ದೇಹ
https://pragati.taskdun.com/udupiyoung-mandeathrailway/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ