Kannada NewsLatest

ಸಕ್ಕರೆ ಕಾರ್ಖಾನೆ ಟ್ರ್ಯಾಕ್ಟರ್ ಚಾಲಕನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಹೋದರ ಪರಪ್ಪ ಸವದಿ ಅವರು ಅಧ್ಯಕ್ಷರಾಗಿರುವ ಕೃಷ್ಣಾ ಸಕ್ಕರೆ ಕಾರ್ಖಾನೆಯ ಟ್ರ್ಯಾಕ್ಟರ್ ಚಾಲಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ನಡೆದಿದೆ.

25 ವರ್ಷದ ಸಿದ್ಧಾರೂಡ ಶಿರಗುಪ್ಪ ಎಂಬ ಚಾಲಕನನ್ನು ಅಥಣಿಯಲ್ಲಿ ಕೈ-ಕಾಲು ಕಟ್ಟಿ ಹಾಕಿ ನೇಣು ಬಿಗಿದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ದರೂರು ಗ್ರಾಮದ ನಿವಾಸಿಯಾಗಿದ್ದ ಸಿದ್ಧಾರೂಢ ಶಿರಗುಪ್ಪ,  ಕಳೆದ ರಾತ್ರಿ  11 ಗಂಟೆ ವೇಳೆ ಅಥಣಿಯಿಂದ ಮನೆಗೆ ವಾಪಸ್ ಆಗುತ್ತಿದ್ದಾಗ  ದುಷ್ಕರ್ಮಿಗಳು ಹಿಡಿದು ಕಟ್ಟಿಹಾಕಿ ನೇಣು ಬಿಗಿದು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪತ್ರಕರ್ತರ ಹೆಸರಲ್ಲಿ ಸುಲಿಗೆ; ನಾಲ್ವರ ಬಂಧನ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button