Latest

ಮುರುಘಾ ಶರಣರ ವಿರುದ್ದ NCPR ನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದರೂ ಅವರ ಬಂಧನಕ್ಕೆ ಪೊಲೀಸ್ ಇಲಾಖೆ ಮೀನ-ಮೇಷ ಎಣಿಸುತ್ತಿರುವುದರ ಬೆನ್ನಿಗೇ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಪೋಕ್ಸೋ ಕಾಯಿದೆ ಅಡಿ ಮುರುಘಾಶರಣರ ವಿರುದ್ಧ FIR ದಾಖಲಾಗಿದ್ದರೂ ಅವರ ಬಂಧನಕ್ಕೆ ಪೊಲೀಸ್ ಇಲಾಖೆ ಮೀನ-ಮೇಷ ಎಣಿಸುತ್ತಿರುವ ಆರೋಪ ಕೇಳಿಬಂದಿತ್ತು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರು CRPC ಕಲಂ 164ರ ಅಡಿ ಹೇಳಿಕೆ ದಾಖಲಿಸಿಕೊಳ್ಳಲು ಸಹ ಪೊಲೀಸರು ವಿಳಂಬಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು. FIR ದಾಖಲಾದ 48 ಗಂಟೆಗಳ ನಂತರ ಬಾಲಕಿಯರ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು.

ಇನ್ನೊಂದೆಡೆ ಮುರುಘಾಶರಣರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯದ ವಿಚಾರಣೆಯಲ್ಲಿದೆ. ನ್ಯಾಯಾಲಯ ಇಂದೇ ಈ ವಿಚಾರಣೆಯನ್ನು ಮುಂದೂಡಿದೆ. ಇದೇ ವೇಳೆ NCPR ಈ ನಿರ್ಧಾರ ತಳೆದಿರುವುದುಹೆಚ್ಚು ಮಹತ್ವ ಪಡೆದಿದೆ.

ಪ್ರಕರಣ ಕುರಿತು NCPR ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದೆ. FIR ದಾಖಲಾದ ದಿನದಿಂದ ಇಲ್ಲಿಯವರೆಗಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲು 7 ದಿನಗಳ ಗಡುವು ನೀಡಿದೆ.

ಇದೊಂದು ಜಾಮೀನು ರಹಿತ ಅಪರಾಧದ ಲಕ್ಷಣಗಳನ್ನು ಹೊಂದಿದ ಪ್ರಕರಣವಾಗಿದ್ದು ಸಂತ್ರಸ್ತ ಬಾಲಕಿಯರು ಸುದೀರ್ಘ ಕಾಲ ಆರೋಪಿ ವಶದಲ್ಲಿದ್ದುದರಿಂದ ಪ್ರಭಾವ ಬೀರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ ಆಗ್ರಹಿಸಿ ಜನವಾದಿ ಸಂಘಟನೆ ಹಾಗೂ ಇತರ ಮಹಿಳಾ ಸಂಘಟನೆಯವರು ಮನವಿ ಸಲ್ಲಿಸಿದ್ದರು.

ಮುರುಘಾಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button