
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಪ್ರಯುಕ್ತ, ಕರ್ನಾಟಕ ಸರ್ಕಾರಿ ನೌಕರರ ಸಂಘ, ಬೆಳಗಾವಿ ಶಾಖೆ ಸಹಯೋಗದೊಂದಿಗೆ ನಿವೇದಾರ್ಪಣ ಸಂಗೀತ ಅಕಾಡಮಿಯ ಶರಧಿ ಗಾಯಕರ ತಂಡದಿಂದ ನ.23ರಂದು ಕನ್ನಡ ಮಧುರ ಗೀತೆಗಳ ಸಂಗೀತ ಸಂಜೆ ಕಾರ‍್ಯಕ್ರಮ ಆಯೋಜಿಸಿದೆ.
ಸಾಯಂಕಾಲ ೫.೩೦ ಘಂಟೆಯಿಂದ ಬೆಳಗಾವಿಯ ಕೋರ್ಟ್ ಆವರಣದಲ್ಲಿರುವ ಸರ್ಕಾರಿ ನೌಕರ ಭವನದಲ್ಲಿ ಸುಮಧುರ ಕನ್ನಡ ಗೀತ ಸಂಜೆ ಎಂಬ ಕನ್ನಡ ಚಲನಚಿತ್ರ ಗೀತೆಗಳ ಕರೋಕೆ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ್ ಆಮಿಸಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ‍್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
(ನಿರಂತರ ಸುದ್ದಿಗಳಿಗಾಗಿ -https://pragati.taskdun.com )
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ