*ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಸಂಗೀತ ಕಲಿಕಾ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ (ಜು.15) ಹುಕ್ಕೇರಿ ತಾಲೂಕಿನ ನರಸಿಂಗಪೂರದ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕಿಯರ ತರಬೇತಿ ನಿಲಯದಲ್ಲಿ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ “ಸಂಗೀತ ತರಬೇತಿ ಕಾರ್ಯಗಾರ” ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಕೆ.ಎಚ್. ಚನ್ನೂರ ಶಾಸ್ತ್ರ ಬದ್ಧವಾಗಿ ಸಂಗೀತವನ್ನು ಏಕಾಗ್ರತೆಯಿಂದ ಕಲೆತಾಗ ಮಾತ್ರ ಸಂಗೀತ ಕಲೆಯಲು ಸಾಧ್ಯವಾಗುತ್ತದೆ ಎಂದರು.
ಸಂಗೀತವನ್ನು ಎಲ್ಲರೂ ಕಲಿಯಲು ಸಾಧ್ಯವಿಲ್ಲ, ನಿರಂತರ ಸೇವೆಯಿಂದ ಶ್ರದ್ಧೆಯಿಂದ ಮಾತ್ರ ಸಂಗೀತ ಕಲಿಯಲಿಕ್ಕೆ ಸಾಧ್ಯವಾಗುತ್ತದೆ. ಸಂಗೀತ ವಿದ್ಯಾರ್ಹತೆ ಹೊಂದಿರುವ ಗುರುಗಳು ಇರುವುದರಿಂದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಸಂಗೀತ ಕಲಿಯಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ ಭಜಂತ್ರಿ, ಸಂಗೀತ ತರಬೇತಿ ಗುರುಗಳು ಮತ್ತು ಗಾಯಕಿ ರೂಪಾ ಖಡಗಾಂವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.