Latest

ನಾಡಹಬ್ಬ ಮೈಸೂರು ದಸರಾಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಕೊರೊನಾ ವಾರುಯರ್ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಉದ್ಘಾಟನೆ ಮಾಡಿದ್ದಾರೆ.

ಚಾಮುಂಡಿ ದೇವಿಗೆ ಪುಷಾರ್ಚನೆ ಮಾಡುವ ಮೂಲಕ ಮೈಸೂರು ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್, ಸರಳ ದಸರಾ ಮಾಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Home add -Advt

ಈಗ ಕಾಲ ಬದಲಾಗಿಲ್ಲ. ಜನರೇ ಬದಲಾಗಿದ್ದಾರೆ. ಜನರ ಮಧ್ಯೆ ಸಂಪರ್ಕ ಕಡಿಮೆಯಗಿದೆ. ಪಕ್ಕದ ಮನೆಯಲ್ಲಿ ಯಾರು ಇರುತ್ತಾರೆ ಎಂಬುದು ಸಹ ಗೊತ್ತಿರಲ್ಲ. ಸಾಮಾಜಿಕ ಜಾಲತಾಣಗಳು ಸಮಾಜವನ್ನು ಕಟ್ಟಬೇಕು. ಸಮಾಜದ ಸೇತುವೆಯಾಗಬೇಕು, ಗೋಡೆಯಾಗಬೇಕು. ಸಮಾಜಕ್ಕೆ ಒಳಿತನ್ನು ಮಾಡಬೇಕು.

ಕೊವಿಡ್ ವಿರುದ್ಧ ಕೊರೊನಾ ವಾರಿಯರ್ ಹೋರಾಡ್ತಾರೆ. ವಾರಿಯರ್ ಮೃತಪಟ್ಟರೆ ಹುತಾತ್ಮ ಎನ್ನಬೇಕು. ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಒತ್ತಡ ಹೆಚ್ಚುತ್ತಿದೆ. ಇದರಿಂದ ಅವರ ಆತ್ಮವಿಶ್ವಾಸ ಕುಗ್ಗುತ್ತಿದೆ. ವೈದ್ಯರುಗಳು ಮನೆಯಲ್ಲಿ ಪೂಜೆ ಮಾಡುತ್ತಾರೋ ಇಲ್ಲವೋ ಆದರೆ ರೋಗಿಗಳಿಗಾಗಿ ಪೂಜೆ, ಹರಕೆ ಹೊರುತ್ತಾರೆ. ಯಾರೂ ಹುದ್ದೆಯಿಂದ ದೊಡ್ಡವರಾಗುವುದಿಲ್ಲ. ಅವರು ಮಾಡುವ ಕೆಲಸದಿಂದ ದೊಡ್ಡವರಾಗುತ್ತಾರೆ ಎಂದರು.

Related Articles

Back to top button