Latest

ವಿವಾಹವಾಗಿದ್ದರೂ ಯುವತಿಯೊಂದಿಗೆ ಪ್ರೇಮ; ಪ್ರಿಯತಮೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಪ್ರಿಯತಮೆಯನ್ನು ಹತ್ಯೆಗೈದ ವಿವಾಹಿತ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಕೊಪ್ಪಲು ಗ್ರಾಮದ ಹೆಚ್.ಎಂ.ಲೋಕೇಶ್ (39) ತನ್ನ ಪ್ರೇಯಸಿ ನಾಗಮಂಗಲದ ಅಮೂಲ್ಯ ಎಂಬಾಕೆಯನ್ನು ಕೊಲೆ ಮಾಡಿದ್ದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Home add -Advt

ಪ್ರಥಮ ದರ್ಜೆ ಗುತ್ತಿಗೆದಾರನಾಗಿದ್ದ ಲೋಕೇಶ್ ಗೆ ಈಗಾಗಲೇ ಮದುವೆಯಾಗಿ ಓರ್ವ ಮಗಳಿದ್ದಳು. ಆದರೆ ಎಂಎಸ್ ಸಿ ಓದುತ್ತಿದ್ದ ಅಮೂಲ್ಯಳನ್ನು ಪ್ರೀತಿಸಿದ್ದ. ಅಮೂಲ್ಯ ತನ್ನನ್ನು ವಿವಾಹವಾಗುವಂತೆ ಲೋಕೇಶ್ ಗೆ ಒತ್ತಾಯಿಸಿದ್ದಳು. ಮೈಸೂರಿನ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ ಅಮೂಲ್ಯಳನ್ನು ಕರೆತಂದಿದ್ದ ಲೋಕೇಶ್ ಹೋಟೆಲ್ ರೂಮ್ ನಲ್ಲೇ ಕತ್ತು ಬಿಗಿದು ಸಾಯಿಸಿದ್ದಾನೆ. ಬಳಿಕ ತನ್ನ ಸ್ನೇಹಿತನಿಗೆ ಕರೆ ಮಾಡಿ ಶವವನ್ನು ಸ್ಥಳಾಂತರಿಸಲು ಸಹಾಯ ಮಾಡುವಂತೆ ಕೇಳಿದ್ದಾನೆ. ಇದಕ್ಕೆ ಸ್ನೇಹಿತ ಒಪ್ಪದಿದ್ದಾಗ ಹೋಟೆಲ್ ರೂಮ್ ನಲ್ಲೇ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button