Latest

ಎನ್.ಆರ್ ಸಂತೋಷ್ ಪತ್ನಿಯಿಂದ ಗಂಭೀರ ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನದ ಬೆನ್ನಲ್ಲೇ ಹಲವಾರು ಊಹಾಪೋಗಳ ಸುದ್ದಿ ಹರಡುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್ ಪತ್ನಿ ಜಾಹ್ನವಿ, ರಾಜಕೀಯ ಒತ್ತಡದಿಂದಲೇ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂತೋಷ್ ಗೆ ಹಲವು ದಿನಗಳಿಂದ ರಾಜಕೀಯ ಒತ್ತಡವಿತ್ತು. ನಿದ್ದೆ ಬಾರದೇ ದಿನವೂ ನಿದ್ದೆ ಮಾತ್ರೆ ಸೇವಿಸುತ್ತಿದ್ದರು. ನಿನ್ನೆ ಮನೆಗೆ ಬಂದಾಗಲೂ ಒತ್ತಡದಲ್ಲಿದ್ದರು. ಬದುಕು ಸಾಕಾಗಿದೆ ಎಂದಿದ್ದರು. ನಿನ್ನೆ ಕೂಡ ಎಂದಿನಂತೆ ನಿದ್ದೆ ಮಾತ್ರೆ ಸೇವಿಸಿದ್ದಾರೆ ಎಂದುಕೊಂಡಿದ್ದೆ. ಆದರೆ ಹಲವು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ನಂತರಗೊತ್ತಾಯಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದರು.

Home add -Advt

ಸಂತೋಷ್ ಹಾಗೂ ತಾನು ಚನ್ನಾಗಿಯೇ ಇದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ. ಆದರೆ ಅನಗತ್ಯ ಸುದ್ದಿಗಳು ಹರಡುತ್ತಿವೆ. ರಾಜಕೀಯ ಒತ್ತಡದಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಜಾಹ್ನವಿ ಹೇಳಿದ್ದಾರೆ.

ಎನ್.ಆರ್ ಸಂತೋಷ್ ಪತ್ನಿಯಿಂದ ಗಂಭೀರ ಆರೋಪ

ಆತ್ಮಹತ್ಯೆಗೆ ಯತ್ನ ಹಿನ್ನೆಲೆ; ಸಂತೋಷ್ ವಿರುದ್ಧ ಎಫ್ ಐಆರ್ ದಾಖಲು

Related Articles

Back to top button