Latest

ಆತ್ಮಹತ್ಯೆಗೆ ಯತ್ನ ಹಿನ್ನೆಲೆ; ಸಂತೋಷ್ ವಿರುದ್ಧ ಎಫ್ ಐಆರ್ ದಾಖಲು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಆತ್ಮಹತ್ಯೆ ಯತ್ನ ಕಾನೂನು ಬಾಹಿರ ಹಿನ್ನೆಲೆಯಲ್ಲಿ ಸದಾಶಿವನಗರ ಠಾಣೆ ಪೊಲೀಸರು ಎನ್.ಆರ್.ಸಂತೋಷ್ ವಿರುದ್ಧ ಸೆಕ್ಷನ್ 309 ಅಡಿ ಎಫ್ ಐಆರ್ ದಾಖಲಿಸಿದ್ದಾರೆ.

Home add -Advt

ಸಂತೋಷ್ ನಿನ್ನೆ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಧ್ಯ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತೋಷ್ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರಲ್ಲದೇ ರಾಜಕೀಯ ಒತ್ತಡವೂ ಹೆಚ್ಚಿತ್ತು ಎನ್ನಲಾಗಿದೆ. ಹೀಗಾಗಿ ಪೊಲೀಸರು ಈ ಬಗ್ಗೆ ಎನ್.ಆರ್ ಸಂತೋಷ್ ಅವರ ಹೇಳಿಕೆಯನ್ನು ಕೂಡ ಪಡೆದುಕೊಳ್ಳಲಿದ್ದಾರೆ.

ಆತ್ಮಹತ್ಯೆಗೆ ಯತ್ನ ಹಿನ್ನೆಲೆ; ಸಂತೋಷ್ ವಿರುದ್ಧ ಎಫ್ ಐಆರ್ ದಾಖಲು

Related Articles

Back to top button