Latest

ಕೈ ನಾಯಕರೇ ಡಿಕೆಶಿ ಮುಳುಗಿಸಲಿದ್ದಾರೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅವರನ್ನು ಕಾಂಗ್ರೆಸ್​ ನಾಯಕರೇ ಮುಳುಗಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​ ಕಟೀಲ್​​​​ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ನಳಿನ್​ ಕುಮಾರ್​​ ಕಟೀಲ್​​, ಡಿ.ಕೆ ಶಿವಕುಮಾರ್​​ ಪದಗ್ರಹಣ ಕಾರ್ಯಕ್ರಮ ಆರಂಭಿಕ ಶೂರತ್ವ ಅಷ್ಟೇ. ಡಿಕೆಶಿ ಹೇಳಿರುವ ಬಿಜೆಪಿ ಮುಕ್ತ ಆಗಲ್ಲ, ಬದಲಾಗಿ ಡಿಕೆಶಿ ಮುಕ್ತ ಕಾಂಗ್ರೆಸ್ ಆಗಲಿದೆ ಎಂದರು.

​​ಕಾಂಗ್ರೆಸ್​ ವ್ಯಕ್ತಿಕೇಂದ್ರಿತ ಪಕ್ಷ. ಮುಳುಗುವ ಹಡಗನ್ನು ಡಿಕೆಶಿ ಹತ್ತಿದ್ದಾರೆ. ಮುಂದೆ ಎಲ್ಲಾ ಕಾಂಗ್ರೆಸ್​ ನಾಯಕರು ಸೇರಿಕೊಂಡು ಡಿ.ಕೆ ಶಿವಕುಮಾರ್​​ ಅವರನ್ನು ಮುಳುಗಿಸುತ್ತಾರೆ ನೋಡುತ್ತಿರಿ ಎಂದು ತಿಳಿಸಿದರು.

ಇನ್ನು ನಮ್ಮ ಸಚಿವರಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳೂ ಇಲ್ಲ. ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲೇ ಕೋವಿಡ್​-19 ನಿರ್ವಹಣೆ ಮಾಡಲಾಗುತ್ತಿದೆ. ಆರ್​​. ಅಶೋಕ್​​ ಅವರೇ ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸುವ ಹೊಣೆ ಹೊತ್ತುಕೊಂಡಿದ್ದಾರೆ. ಎಲ್ಲರೂ ಯಡಿಯೂರಪ್ಪ ನೇತೃತ್ವದಲ್ಲೇ ಕೊರೊನಾ ಪರಿಸ್ಥಿತಿ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button