Politics

*ಕನ್ನಡಿಗರ ಹೆಮ್ಮೆಯ ನಂದಿನಿ: ದೇಶದ 6 ರಾಜ್ಯಗಳಲ್ಲಿ ಮಾರುಕಟ್ಟೆ ವಿಸ್ತರಣೆ: ಡಿಸಿಎಂ ಸಂತಸ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ನಂಡಿನಿ ಹಾಲು ದೇಶದ 6 ರಾಜ್ಯಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ದೇಶಾದ್ಯಂತ ಗ್ರಾಹಕರಿಗೆ ಪ್ರಿಯವಾದ ಉತ್ಪನ್ನವಾಗಿರುವುದು ಕರ್ನಾಟಕದ ಹೆಮ್ಮೆಯ ಸಂಗತಿ.

ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಂದಿನಿ ಹಾಲು, ಉತ್ಪನ್ನಗಳು ಪರಿಚಯಗೊಂಡಿದ್ದವು. ಇದೀಗ 6 ರಾಜ್ಯಗಳಿಗೆ ನಂದಿನಿ ಉತ್ಪನ್ನ ತನ್ನ ಮಾರುಕಟ್ಟೆ ವಿಸ್ತರಿಸಿದೆ. ದೆಹಲಿಗೆ ಮಂಡ್ಯದಿಂದ ನಂದಿನಿ ಹಾಲು, ಉತ್ಪನ್ನ ಪೂರೈಕೆಯಾಗುತ್ತಿವೆ. ಮುಂಬೈಗೆ ತುಮಕೂರಿನಿಂದ ಹೈದರಾಬಾದ್ ಗೆ ಹಾಸನದಿಂದ, ಚೆನ್ನೈ ಹಾಗೂ ಕೇರಳಕ್ಕೆ ಮೈಸೂರಿನಿಂದ , ಗೋವಾ ಹಾಗೂ ಪುಣೆಗೆ ಬೆಳಗಾವಿಯಿಂದ, ತಮಿಳುನಾಡು ನೀಲಗಿರಿ ಹಾಗೂ ಕೇರಳಕ್ಕೆ ಚಾಮರಾಜನಗರದಿಂದ, ಸೊಲ್ಲಾಪುರಕ್ಕೆ ಬೆಳಗಾವಿಯಿಂದ, ಮಹಾರಾಷ್ಟ್ರಕ್ಕೆ ವಿಜಯಪುರದಿಂದ ನಂದಿನಿ ಹಾಲು ಸಾಗಾಟವಾಗುತ್ತಿದ್ದು, ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಸ್ವಾಭಿಮಾನದ‌ ಹೆಗ್ಗುರುತು ನಂದಿನಿ! ಕನ್ನಡಿಗರ ಹೆಮ್ಮೆಯ ನಂದಿನಿ ದೇಶದ ಅತ್ಯುತ್ತಮ ಹಾಲಿನ ಬ್ರ್ಯಾಂಡ್ ಆಗ್ತಿದೆ. ದೇಶದ 6 ರಾಜ್ಯಗಳಲ್ಲಿ ನಂದಿನಿ ಮಾರುಕಟ್ಟೆ ವ್ಯಾಪಿಸಿದ್ದು, ಹೊರ ರಾಜ್ಯದ ಜನತೆಗೂ ಫೇವರೇಟ್ ಮಿಲ್ಕ್ ಬ್ರ್ಯಾಂಡ್ ಆಗಿದೆ. ನಮ್ಮ ರೈತರ ಶ್ರಮ‌ದ ಫಲವಾಗಿರುವ ನಂದಿನಿ ಉತ್ಪನ್ನಗಳು ಹಳ್ಳಿಯಿಂದ ದಿಲ್ಲಿ ತಲುಪಿದೆ ಎನ್ನುವುದು ಪ್ರತೀ ಕನ್ನಡಿಗ ಎದೆ ತಟ್ಟಿ ಹೇಳಿಕೊಳ್ಳಬಹುದಾದ ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

Home add -Advt

Related Articles

Back to top button