ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್‌ಗೆ ರಾಷ್ಟ್ರಮಟ್ಟದ ಪ್ರಶಸ್ತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ಗೆ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ವಿಭಾಗದಲ್ಲಿ ತೋರಿರುವ ಅತ್ಯುತ್ಕೃಷ್ಟ ಪ್ರಗತಿಯ ಫಲವಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಹಕಾರ ಮಹಿಳಾ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ.
ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ ೧೯೯೬ ರಲ್ಲಿ ಸ್ಥಾಪನೆಯಾಗಿದ್ದು, ಅಧ್ಯಕ್ಷೆ ಆಶಾ ಕೋರೆಯವರ ನಾಯಕತ್ವದಲ್ಲಿ ಮುನ್ನಡೆದಿದೆ. ಮಹಿಳಾ ಬ್ಯಾಂಕ್ ಪ್ರಸ್ತುತ ೮ ಶಾಖೆಗಳನ್ನು ಹೊಂದಿದೆ. ರೂ ೩೫೫.೯೫ ಕೋಟಿ ಠೇವಣಿಗಳೊಂದಿಗೆ ರೂ ೨೦೬.೫೨ ಕೋಟಿಗಳು ಮುಂಗಡವನ್ನು ಹಣ ಹೊಂದಿದೆ ಹಾಗೂ ೩೧-೦೩-೨೦೨೩ ರಂತೆ ರೂ ೫.೧೯ ಕೋಟಿಗಳ ನಿವ್ವಳ ಲಾಭವನ್ನೂ ಪಡೆದಿದೆ.
ಇಂದಿನ ಅಗತ್ಯಕ್ಕೆ ತಕ್ಕಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವ ಮಹಿಳಾ ಬ್ಯಾಂಕ್‌ನ ಎಲ್ಲ ವ್ಯವಹಾರಗಳ ಅಂಶಗಳ ಪ್ರಗತಿಯನ್ನು ಕೂಲಂಕಶವಾಗಿ ಪರಿಗಣಿಸಿ ಅತ್ಯುತ್ತಮ ಸಹಕಾರಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಅಕ್ಟೋಬರ್ ೧೨ ರಂದು ಗೋವಾದ ರಿಯೊ ರೆಸಾರ್ಟ್‌ನಲ್ಲಿ ಬ್ಯಾಂಕಿಂಗ್ ಫ್ರಾಂಟಿಯರ್ಸ್ ಆಯೋಜಿಸಿದ್ದ ಅದ್ದೂರಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಬ್ಯಾಂಕ್ ವತಿಯಿಂದ ಈ ಪ್ರಶಸ್ತಿಯನ್ನು ನಿರ್ದೇಶಕರಾದ ರಾಜೇಶ್ವರಿ ಎಂ ಕವಟಗಿಮಠ ಮತ್ತು ರೂಪ ಜೆ ಮುನವಳ್ಳಿ ಅವರು ಸ್ವೀಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ