
ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಸುಕ್ಷೇತ್ರ ಮುಗಳಖೋಡ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾ ಶಿವಯೋಗಿಗಳವರ 38ನೇ ಗುರುವಂದನಾ ಕಾರ್ಯಕ್ರಮವು ಬರುವ ಡಿಸೆಂಬರ್ 2 ರಂದು ಜರುಗಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀಮಠದಿಂದ *ಸಿದ್ಧಶ್ರೀ* ರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಲಿದ್ದು, 2022ನೇ ಸಾಲಿನ ರಾಷ್ಟ್ರೀಯ *ಸಿದ್ಧ ಶ್ರೀ* ಪ್ರಶಸ್ತಿಯು ಕನ್ನಡ ಚಲನಚಿತ್ರ ರಂಗದ ಭರವಸೆಯ ನಾಯಕ, *ಕಾಂತಾರ* ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ನೀಡಲಾಗುವುದು ಎಂದು ಸಿದ್ದಶ್ರೀ ಆಡಳಿತ ಮಂಡಳಿ ತಿಳಿಸಿದೆ.
ಗುಲ್ಬರ್ಗ ಶ್ರೀಮಠ ಜಿಡಗಾ ನವ ಕಲ್ಯಾಣ ಮಠದಲ್ಲಿ ಹಾಕಲಾದ ಭವ್ಯವೇದಿಕೆಯಲ್ಲಿ ಶ್ರೀಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಶಿವಯೋಗಿಗಳ ಸನ್ನಿಧಾನದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ *ಸಿದ್ಧ ಶ್ರೀ* ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದೆಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
https://pragati.taskdun.com/latest/high-courtorderminer-girl-rape-case/