ಹಾಲು ಪಾಯಸ
ಹಾಲು, ಅಕ್ಕಿ , ಬೆಲ್ಲ ಮೊದಲಾಗಿ ಪೌಷ್ಟಿಕ ಪದಾರ್ಥಗಳಿಂದ ತಯಾರಿಸುವ ಈ ಪಾಯಸ ಬಾಯಿಗೆ ರುಚಿ ಆರೋಗ್ಯಕ್ಕೂ ಒಳ್ಳೆಯದು, ಅಬಾಲವೃದ್ಧರಾದಿಯಾಗಿ ಯಾರೂ ಸಹ ಸೇವಿಸಬಹುದಾದ ಅಲ್ಲದೇ ತಯಾರಿಸಲೂ ಸುಲಭವಾದ ಕಜ್ಜಾಯವಿದು.
ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ ಅರ್ಧ ಕಪ್ , ಬೆಲ್ಲ ಒಂದು ವರೆಕಪ್, ಹಾಲು ಅರ್ಧ ಲೀ. ಏಲಕ್ಕೆ 2-3, ದ್ರಾಕ್ಷಿ, ಗೋಡಂಬಿ ( ಸ್ವಲ್ಪ ), ಚಿಟಿಕೆ ಉಪ್ಪು.
ಮಾಡುವ ವಿಧಾನ :
ಅಕ್ಕಿಗೆ ಎರಡು ಕಪ್ ನೀರು ಮತ್ತು ಎರಡು ಕಪ್ ಹಾಲನ್ನು ಸೇರಿಸಿ ಕುಕ್ಕರ್ ನಲ್ಲಿ 6-7 ಸೀಟಿ ಹೊಡೆಸಬೇಕು.
ಜೋನಿ ಬೆಲ್ಲವಾದರೆ ಬಿಸಿ ಮಾಡಿ ಇಟ್ಟುಕೊಳ್ಳಬೇಕು. ಗಟ್ಟಿ ಬೆಲ್ಲ ಬಳಸಿದರೆ ಕರಗಿಸಿ ಬಿಸಿಮಾಡಿ ಇಟ್ಟುಕೊಳ್ಳಬೇಕು. ಜೋನಿ ಬೆಲ್ಲ ಆದರೂ ಸಹ ಕಾಯಿಸಿ ಇಟ್ಟುಕೊಳ್ಳಬೇಕು. ಜೋನಿ ಬೆಲ್ಲ ಬಳಸಿದರೆ ರುಚಿ ಹೆಚ್ಚು.
ಕುಕ್ಕರ್ ನಲ್ಲಿ ಇರುವ ಅಕ್ಕಿ ಬೆಂದು ಆರಿದ ಬಳಿಕ ಒಂದು ಪಾತ್ರೆಗೆ ಹಾಕಿ ಉಳಿದ ಹಾಲನ್ನು ಹಾಕಿ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಟ್ಟು ಕೈ ಆಡಿಸುತ್ತ ಕಾಯಿಸಬೇಕು. 10
ನಿಮಿಷದ ಬಳಿಕ ಕಾಯಿಸಿ ಇಟ್ಟ ಬೆಲ್ಲವನ್ನು ಇದಕ್ಕೆ ಹಾಕಬೇಕು ಹಾಗೆ 5 ನಿಮಿಷ ಕುದಿಸಬೇಕು. ನಂತರ ದ್ರಾಕ್ಷಿ ಗೋಡಂಬಿಯನ್ನು ಸ್ವಲ್ಪ ಬಿಸಿ ಮಾಡಿ ಸೇರಿಸಬೇಕು. ತಣ್ಣಗಾದಮೇಲೆ ಪಾಯಸ ತುಂಬಾ ದಪ್ಪ ಎನಿಸಿದರೆ ಸ್ವಲ್ಪ ಹಾಲು ಸೇರಿಸಬಹುದು.
( ಸೂಚನೆ….. ಬೆಲ್ಲವನ್ನು ಮೊದಲೇ ಕಾಯಿಸಿ ಹಾಕದಿದ್ದರೆ ಹಾಲು ಒಡೆದುಹೋಗುತ್ತದೆ. )
-ಸಹನಾ ಭಟ್, ಸಹನಾಸ್ ಕಿಚನ್
ನವರಾತ್ರಿಗಾಗಿ ವಿಶೇಷ ಕಜ್ಜಾಯ – ಭಾಗ 1
ನವರಾತ್ರಿಗಾಗಿ ವಿಶೇಷ ಕಜ್ಜಾಯ – ಭಾಗ 3
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ