Kannada NewsKarnataka NewsLatest

ಶುಕ್ರವಾರವೇ ನೇಕಾರ ಸಮ್ಮಾನ್ ನಿಧಿ ಬಿಡುಗಡೆ ; ಶನಿವಾರ ನೇಕಾರರ ಸಮಸ್ಯೆ ಚರ್ಚೆ – ಶಾಸಕ ಅಭಯ ಪಾಟೀಲ್ ಗೆ ಸಿಎಂ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಬಹುದಿನಗಳಿಂದ ಬಾಕಿ ಉಳಿದಿದ್ದ ನೇಕಾರ್ ಸಮ್ಮಾನ್ ನಿಧಿಯನ್ನು ಶುಕ್ರವಾರವೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಜೊತೆಗೆ, ನೇಕಾರರ ಸಮಸ್ಯೆಗಳ ಕುರಿತು ಚರ್ಚಿಸಲು ಶನಿವಾರ ಸಮಯ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು, ಶಾಸಕ ಸಿದ್ದು ಸವದಿ ಅವರೊಂದಿಗೆ ಭೇಟಿ ಮಾಡಿದ ಅಭಯ ಪಾಟೀಲ ಪ್ರಗತಿವಾಹಿನಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಕೃಷಿ ಸಮ್ಮಾನ್ ನಿಧಿಯಂತೆ ನೇಕಾರ್ ಸಮ್ಮಾನ ನಿಧಿ ನೀಡುವಂತೆ ಕಳೆದ ಬಾರಿ ಬೆಳಗಾವಿ ಅಧಿವೇಶನದ ವೇಳೆಯೇ ಒತ್ತಾಯಿಸಲಾಗಿತ್ತು. ಆಗ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದರು. ಆದರೆ ಹಣ ಬಿಡುಗಡೆಯಾಗಿರಲಿಲ್ಲ. ಇದಲ್ಲದೆ ನೇಕಾರರ ಹಲವಾರು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಬೇಕಿದೆ. ಹಾಗಾಗಿ ಈ ಎರಡೂ ವಿಷಯಗಳ ಕುರಿತು ಚರ್ಚಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ್ದೇವು ಎಂದು ಅವರು ತಿಳಿಸಿದರು.

ನಾಳೆಯೇ ನೇಕಾರ ಸಮ್ಮಾನ್ ನಿಧಿ ಬಿಡುಗಡೆ ಮಾಡಲಾಗುವುದು. ಶನಿವಾರ ನೇಕಾರರ ಇತರ ಸಮಸ್ಯೆಗಳ ಕುರಿತು ಚರ್ಚಿಸಲು ಸಮಯ ನೀಡುತ್ತೇನೆ. ಶಾಸಕರು ಹಾಗೂ ನೇಕಾರ ಸಮಾಜದ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಭಯ ಪಾಟೀಲ ತಿಳಿಸಿದರು.

 

*ಭಾರತದ ನಾಯಕತ್ವದಲ್ಲಿ ಹೊಸ ಯುಗ ಪ್ರಾರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/cm-basavarj-bommaikoppalabjp-office/

*ಶಾಸಕ ಅಭಯ್ ಪಾಟೀಲ್ ಗೆ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಹುದ್ದೆ?*

https://pragati.taskdun.com/vidhanasabhadeputy-speakerabhay-patil/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button