
ಪ್ರಗತಿವಾಹಿನಿ ಸುದ್ದಿ: ನೇಪಾಳದಲ್ಲಿ ಭುಗಿಲೆದ್ದ ಹಿಂಸಾಚಾರ ಬೆನ್ನಲ್ಲೇ ಫ್ರೆಂಚ್ ರಾಜಧಾನಿ ಪ್ಯಾರಿಸ್ ಹೊತ್ತಿ ಉರಿಯುತ್ತಿದೆ. ಅನೇಕ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಹಿಂಸಾಚಾರ ಸೃಷ್ಟಿಸಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಬಜೆಟ್‌ನಲ್ಲಿ 44 ಬಿಲಿಯನ್ ಯುರೋ ಉಳಿಸುವ ಯೋಜನೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ರಕ್ಷಣಾ ಸಚಿವ ಲೆಕೋರ್ನ್ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ. ಈ ನಿರ್ಧಾರ ವಿರೋಧಿಸಿ ಪ್ಯಾರಿಸ್‌ನಲ್ಲಿ ದಂಗೆಗಳು ಪ್ರಾರಂಭಗೊಂಡಿವೆ.
ಪೊಲೀಸರು ದಂಗೆಯನ್ನು ನಿಯಂತ್ರಿಸಲು ಅಶ್ರುವಾಯು, ಶೆಲ್‌ಗಳನ್ನು ಬಳಸಿಕೊಂಡು 200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ರೆನ್ನೆಸ್‌ನಲ್ಲಿ ಬಸ್‌ಗೆ ಬೆಂಕಿ ಹಚ್ಚಿದ ಪರಿಣಾಮ ವಿದ್ಯುತ್ ಕಡಿತಗೊಂಡು ರೈಲು ಸಂಚಾರ ಸ್ಥಗಿತಗೊಂಡಿದೆ.