ಬೆಳಗಾವಿಯಲ್ಲಿ ಹೊಸ ವಿದ್ಯುತ್ ಉಪಕೇಂದ್ರ: ಸೋಮವಾರ ಭೂಮಿ ಪೂಜೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ನೂತನವಾಗಿ 220 ಕೆವಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆಯಾಗಲಿದ್ದು, ಸೋಮವಾರ ಭೂಮಿ ಪೂಜೆ ನಡೆಯಲಿದೆ.
ಸೋಮವಾರ ಸಂಜೆ 5 ಗಂಟೆಗೆ ಮಚ್ಚೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಶಾಸಕ ಅಭಯ ಪಾಟೀಲ ಅಧ್ಯಕ್ಷತೆವಹಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ಆಸೀಫ್ (ರಾಜು)ಸೇಠ್, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಜಿಲ್ಲಾಧಿಕಾರಿ ನಿತೀಶ ಪಾಟೀಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
25020 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ವಿದ್ಯುತ್ ಉಪಕೇಂದ್ರ 39 ಕಿಮೀ ವಿದ್ಯುತ್ ಪ್ರಸರಣ ಮಾರ್ಗ ಹೊಂದಿದ್ದು, 2024ರ ಸೆಪ್ಟಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಯೋಜನೆಯ ಉದ್ದೇಶ
ಬೆಳಗಾವಿ ಜಿಲ್ಲೆಯ ಮಚ್ಚೆ ಕೈಗಾರಿಕಾ ಪ್ರದೇಶ, ಗೃಹ ಬಳಕೆ ಹಾಗೂ ನೀರಾವರಿ ಕೃಷಿ ಚಟುವಟಿಕೆಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸುವದು.
• ಹಾಲಿ ಇರುವ 220 ಕೆ.ವಿ. (3×100 ಎಂವಿಎ) ಬೆಳಗಾವಿ ವಿದ್ಯುತ್ ಸ್ವೀಕರಣಾ ಕೇಂದ್ರದ ಹೆಚ್ಚುವರಿ ವಿದ್ಯುತ್ ಒತ್ತಡ ಕಡಿಮೆಗೊಳಿಸುವದು.
ಹಾಲಿ110 ಕೆ.ವಿ ವಿದ್ಯುತ್ ವಿತರಣಾ ಮಾರ್ಗದಲ್ಲಿನ ಎನರ್ಜಿ ಲಾಸ್ ಕಡಿಮೆಯಾಗುವುದರಿಂದ ಮಚ್ಚೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸಬಹುದಾಗಿದೆ. ಭವಿಷ್ಯದ ವಿದ್ಯುತ್ ಭಾರವನ್ನು ನಿಭಾಯಿಸಬಹುದಾಗಿದೆ. ವಿದ್ಯುತ್ ಪೂರೈಕೆಯಲ್ಲಿನ ಅಡಚಣೆಗಳು ಹಾಗೂ ವೋಲ್ವೇಜ್ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಇದರಿಂದ ವಿದ್ಯುತ್ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆಯಾಗುವುದು.
• ಹೊಸ 220 ಕೆ.ವಿ ಮಚ್ಚೆ ವಿದ್ಯುತ್ ಕೇಂದ್ರ ಸ್ಥಾಪನೆಯಿಂದ ಈ ಕೆಳಕಂಡ 110 ಕೆ.ವಿ. ಉಪ-ಕೇಂದ್ರಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವದು.
> 110 ಕೆ.ವಿ ಉಪ-ಕೇಂದ ಸುವರ್ಣ ಸೌಧ
>110 ಕೆ.ವಿ ಉಪ-ಕೇಂದ ಉದ್ಯಮಬಾಗ್
>110 ಕೆ.ವಿ ಉಪ-ಕೇಂದ ಉಚಗಾಂವ
>110 ಕೆ.ವಿ ಉಪ-ಕೇಂದ ಹಿರೇಬಾಗೇವಾಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ