VTU Add
Beereshwara 36
LaxmiTai 5

*ಹಳಿತಪ್ಪಿದ ಎಕ್ಸ್ ಪ್ರೆಸ್ ರೈಲು; 15 ಜನರು ಸಾವು*

Anvekar 3

ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: ಹಜಾರಾ ಎಕ್ಸ್ ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿದ್ದು, ಘಟನೆಯಲ್ಲಿ 15 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ನವಾಬ್ ಶಾಹ್ ನಲ್ಲಿ ನಡೆದಿದೆ.

ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿದ್ದ ರೈಲಿನ 8 ಬೋಗಿಗಳು ಹಳಿ ತಪ್ಪಿವೆ. ಅಪಘಾತದಲ್ಲಿ 15 ಪ್ರಯಾಣಿಕರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Emergency Service

ಸಹಾರಾ ರೈಲು ನಿಲ್ದಾಣದ ಬಳಿಯೇ ಈ ದುರಂತ ಸಂಭವಿಸಿದೆ. ರೈಲು ಹಳಿ ತಪ್ಪಲು ಕರಣ ತಿಳಿದುಬಂದಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Cancer Hospital 2
Bottom Add3
Bottom Ad 2