Kannada NewsLatestNational

*ಬಾಲಕರನ್ನು ಕಟ್ಟಿಹಾಕಿ ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನಕಾಯಿ ಹಾಕಿ ಪೆಟ್ರೋಲ್ ಇಂಜಕ್ಷನ್ ಕೊಟ್ಟ ಕಿರಾತಕರು*

ಪ್ರಗತಿವಾಹಿನಿ ಸುದ್ದಿ; ಲಖನೌ: ಕೋಳಿ ಕದ್ದಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಹಿಡಿದು ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನಕಾಯಿ ಉಜ್ಜಿ ಅಟ್ಟಹಾಸ ಮೆರೆದಿರುವ ಘಟನೆ ಉತ್ತರ ಪ್ರದೇಶದ ದಮರಿಯಾಗಂಜ್ ತಹಶಿಲ್ ನ ಸಿದ್ಧಾರ್ಥ್ ನಗರದಲ್ಲಿ ನಡೆದಿದೆ.

ಇಬ್ಬರು ಬಾಲಕರು ಹಣ ಹಾಗೂ ಕೋಳಿಗಳನ್ನು ಕದಿಯುತ್ತಿದ್ದರು ಎಂಬ ಆರೋಪದ ಮೇರೆಗೆ ಕೋಳಿ ಫಾರಂ ನಿರ್ವಾಹಕರು ಈ ರೀತಿ ಅಮಾನವೀಯವಗಿ ನಡೆದುಕೊಂಡಿದ್ದಾರೆ. ಮಕ್ಕಳನ್ನು ಕಂಬಕ್ಕೆ ಕಟ್ಟಿಹಾಕಿ ಬಲವಂತವಾಗಿ ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನಕಾಯಿ ಉಜ್ಜಿ, ಸೊಂಟಕ್ಕೆ ಪೆಟ್ರೋಲ್ ಇಂಜಕ್ಷನ್ ಕೊಟ್ಟು ಕ್ರೌರ್ಯ ಮೆರೆದಿದ್ದಾರೆ.

Home add -Advt

ಪೆಟ್ರೋಲ್ ರಕ್ತದೊಳಗೆ ಸೇರಿದರೆ ಮೂತ್ರಪಿಂಡದ ಮೂಲಕ ಹೃದಯಕ್ಕೆ ಸಂಚರಿಸುವ ಸಾಧ್ಯತೆ ಇದ್ದು, ನಿಧಾನವಾಗಿ ನರಮಂಡಲದ ತುಂಬೆಲ್ಲ ಹರಡಿ ಪಾರ್ಶ್ವವಾಯು ಅಪಾಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರಕರಣ ಸಂಬಂಧ ಪೊಲೀಸರು 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Related Articles

Back to top button