Kannada NewsKarnataka NewsLatestPragativahini Special

*ನೂತನ ವರ್ಷದ ಆಗಮನ*

ಹೊಸ ವರ್ಷ ಬರುವುದು, ಹಳೆಯ ವರ್ಷ ಹೋಗುವುದು ಸೃಷ್ಟಿಯ ನಿಯಮವಾಗಿದೆ. ಹಳೆಯ ವರ್ಷದ ಅನೇಕ ಘಟನಾವಳಿಗಳನ್ನು ಮರೆತು ನಾವು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತೇವೆ. ಹೊಸ ವರ್ಷದ ಮೊದಲನೆಯ ದಿನ ಅದೇ ಸೂರ್ಯ, ಚಂದ್ರ ತಾರೆಗಳು, ಅದೇ ಭೂಮಿ, ಆಕಾಶ, ಜಲ, ವಾಯು ಮುಂತಾದ ಪಂಚತತ್ವಗಳು ತಮ್ಮ ಸೇವೆಯಲ್ಲಿ ನಿರತವಾಗಿರುತ್ತವೆ ಕೇವಲ ಮಾನವನಿಗೆ ಮಾತ್ರ ಹೊಸ ವರ್ಷದ ಸಂಭ್ರಮ. ಕೆಲವರು ಕುಡಿದು, ಕುಣಿದು, ಕುಪ್ಪಳಿಸಿ ಸಂಭ್ರಮದಿಂದ ಆಚರಿಸಿದರೆ, ಹಲವರು ಭಯ-ಭಕ್ತಿ ಭಾವನೆಗಳಿಂದ ಆಚರಿಸುವುದು ಪರಿಪಾಠವಾಗಿದೆ. ಅವರವರ ಭಾವಕ್ಕೆ ಅವ ರವರ ಭಕುತಿಗೆ ತಕ್ಕಂತೆ ದೇಶ ವಿದೇಶಗಳಲ್ಲಿ ಹೊಸ ವರ್ಷದ ಆಚರಣೆ ನಡೆಯುತ್ತದೆ.
ಭಾರತ ದೇಶದೆಲ್ಲೆಡೆ ನವವರ್ಷದ ಆಗಮನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ದೇವಾಲಯ, ಪ್ರಾರ್ಥನಾ ಮಂದಿರ ಮತ್ತು ಕ್ರೈಸ್ತ ದೇವಾಲಯಗಳಲ್ಲಿ ವಿಶೇಷವಾಗಿ ಹೊಸ ವರ್ಷದ ಆಚರಣೆ ನಡೆಯುತ್ತದೆ.


ಹಾಗೆ ನೋಡಿದರೆ ಕಳೆದು ಹೋದ ಸಮಯ, ಬಾಯಿಂದ ಬಂದ ಮಾತು, ಬಂದೂಕಿನಿಂದ ಹೊರಟ ಬುಲೆಟ್, ನದಿಯಲ್ಲಿ ಹರಿಯುವ ನೀರು, ಎಂದಿಗೂ ಮರಳಿ ಬರುವುದಿಲ್ಲ. ಇದೇ ರೀತಿ ಕಳೆದುಹೊದ ವರ್ಷ ಮತ್ತೆ ಬರಲಾರದು.


ಹೊಸ ವರ್ಷದಲ್ಲಿ ಜೀವನದಲ್ಲಿ, ಹೊಸ ಯೋಜನೆ, ಹೊಸ ಜೀವನ ಶೈಲಿ, ಹೊಸ ವಿಚಾರಗಳು, ನವ ಚೈತನ್ಯ, ನವನವೀನತೆಯು ತುಂಬಿ ತುಳುಕಾಡಲಿ. ನಮ್ಮ ಹೊಸ ಬಾಳು, ಮನಸ್ಸು, ಶರೀರ, ಸಮಾಜ ಹಾಗೂ ಸೃಷ್ಟಿಗೆ ಸಮರ್ಪಿತವಾಗಲಿ. ನಡೆದಿರುವ ಎಲ್ಲಾ ಕರ್ಮದ ಖಾತೆಗಳನ್ನು ಸಮಾಪ್ತಿ ಮಾಡಿ, ನಕಾರಾತ್ಮಕ ಚಿಂತನೆಯನ್ನು ಸಕಾರಾತ್ಮಕ ಚಿಂತನೆಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು. ಗ್ರಹಣದ ಸಮಯದಲ್ಲಿ ಹೇಗೆ ಹಳೆಯ ವಸ್ತುಗಳನ್ನು ದಾನಮಾಡುತ್ತಾರೆಯೋ ಹಾಗೆಯೇ ನಮ್ಮ ಹಳೆ ಸಂಸ್ಕಾರ, ವಿಚಾರ-ವ್ಯವಹಾರಗಳನ್ನು ಭಗವಂತನಿಗೆ ದಾನ ಮಾಡಬೇಕು. ಇದರ ಪ್ರತೀಕವಾಗಿ ಶಿವಪುರಾಣದಲ್ಲಿ ಶಿವನು ಬ್ರಹ್ಮಕಪಾಲವನ್ನು ಹಿಡಿದು ಭಿಕ್ಷೆಯನ್ನು ಬೇಡಿದನೆಂದು ಬರೆಯಲಾಗಿದೆ.

Home add -Advt


ಹೊಸ ವರ್ಷದ ಬೆಳಿಗ್ಗೆ 7 ಸಂಕಲ್ಪಗಳನ್ನು ಮಾಡಿ ಮತ್ತು ಇಡಿ ದಿನ ಉಲ್ಲಾಸದಿಂದ ಕಳಿಯರಿ:

  1. ಬೆಳಿಗ್ಗೆ ಎದ್ದ ತಕ್ಷಣ ಪರಮಾತ್ಮನಿಗೆ ಗುಡ್ ಮಾರ್ನಿಂಗ್ ಮಾಡಿ. ಅವನೇ ಅಲ್ಲಾಹ, ಖುದಾ. ಗಾಡ್, ಈಶ್ವರ ಆಗಿದ್ದಾನೆ. ಅವನಿಗೆ ಧನ್ಯವಾದಗಳನ್ನು ಅರ್ಪಿಸಿರಿ. ಅವನಿಂದ ಸುಖ, ಶಾಂತಿ, ಪ್ರೀತಿ, ಆನಂದ, ಪವಿತ್ರತೆಯ ಶಕ್ತಿಗಳನ್ನು ಪಡೆಯಿರಿ.
  2. ನಾನು ಸರ್ವಶಕ್ತಿವಂತ ಭಗವಂತನ ಮಗು ಆಗಿದ್ದೇನೆ. ಅವನಿಂದ ಸರ್ವೋಚ್ಛ ಶಕ್ತಿಯನ್ನು ಪಡೆದು ಶಕ್ತಿಶಾಲಿಯಾಗಬೇಕು.
  3. ನಾನು ಶಾಂತಿಸಾಗರ ಪರಮಾತ್ಮನ ಸಂತಾನನಾಗಿದ್ದೇನೆ. ಶಾಂತಿಯೇ ನನ್ನ ಸ್ವಧರ್ಮವಾಗಿದೆ. ನನ್ನ ಚಿತ್ತವು ಸಂಪೂರ್ಣ ಶಾಂತವಾಗಿದೆ ಎಂದು ಅನುಭವ ಮಾಡಿರಿ.
  4. ನಾನು ಅಚಲ ಅಡೋಲವಾಗಿದ್ದೇನೆ. ನನಗೆ ಯಾರು ಅಲುಗಾಡಿಸಲು ಅಸ್ಥಿರ ಮಾಡಲು ಸಾಧ್ಯವಿಲ್ಲ.
  5. ನಾನು ಎಲ್ಲರಿಗೂ ಚಿರರುಣಿಯಾಗಿದ್ದೇನೆ. ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ. ನಿಮ್ಮ ದೇಹ ಪ್ರಕೃತಿಯ ಪಂಚ ತತ್ವಗಳಾದ ನೀರು, ಜಲ. ಅಗ್ನಿ, ವಾಯು ಮತ್ತು ಭೂಮಿಗೆ, ನಿಮ್ಮ ಸಂಪರ್ಕದಲ್ಲಿ ಬರುವ ಪ್ರತಿಯೊಬ್ಬರಿಗೂ ವಂದನೆಗಳನ್ನು ನೀಡಿರಿ.
  6. ನಾನು ಈ ಸೃಷ್ಟಿನಾಟಕದ ರಂಗಮಂಟಪದ ಮೇಲೆ ಪಾತ್ರಮಾಡುವ ಏಕೈಕ ಅತಿಶ್ರ್ರೇಷ್ಠ ಪಾತ್ರಧಾರಿಯಾಗಿದ್ದೇನೆ. ನನ್ನ ಹಾಗೆ ಮತ್ತೆ ಯಾರು ಅಭಿನಯಿಸಲು ಸಾಧ್ಯವಿಲ್ಲ.
  7. ನೀವು ಹೇಗೆ ಇದ್ದೀರಿ? ನಿಮಗೆ ಏನಾದರೂ ಬೇಕೇ? ಎಂದು ನಿಮಗೆ ಆತ್ಮಿಯರಾಗಿರುವವರಿಗೆ ಕೇಳುತ್ತೀರಿ. ಇಂದಿನಿಂದ ನೀವು ನಿಮ್ಮ ಮನಸ್ಸಿಗೆ ಕೇಳಿಕೊಳ್ಳಿ – ನಾನು ಆರಾಮವಾಗಿ ಇದ್ದೇನೆಯೇ? ಒಂದು ವೇಳೆ ಎಲ್ಲವೂ ಸರಿಯಿಲ್ಲದಿದ್ದರೆ, ಮನಸ್ಸಿನೊಂದಿಗೆ ಪ್ರೀತಿಯಿಂದ ಮಾತನಾಡಿ ಅದನ್ನು ಸರಿಪಡಿಸಿಕೊಳ್ಳಿರಿ.
    ಭಗವಂತ ನೀಡುವ ಜ್ಷಾನದ ಪ್ರಕಾರ ಈ ಸಮಯವು ಸೃಷ್ಟಿ ನಾಟಕದ ಅಂತಿಮ ಸಮಯವಾಗಿದೆ. ಪರಮಾತ್ಮ ಮತ್ತು ನಾವು ಆತ್ಮರು ಆತಿಸುಕ್ಷ್ಮ ಜ್ಯೋತಿ ಬಿಂದು ಅಗಿದ್ದೇವೆ. ನಾವುಗಳು ಸಮಿಪದ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಹೋಗಿ ಕಲಿಯೋಣ. ಮತ್ತು ಪರಮಾತ್ಮನಿಂದ ಸರ್ವಪ್ರಾಪ್ತಿಗಳನ್ನು ಪಡೆದುಕೊಳ್ಳೋಣ.

ಬ್ರ.ಕು.ವಿಶ್ವಾಸ ಸೋಹೋನಿ. ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್



Related Articles

Back to top button