
ಪ್ರಗತಿವಾಹಿನಿ ಸುದ್ದಿ: ತನ್ನ ತಂದೆಯ ಅಕ್ಕನ ಗಂಡ ಅಂದರೆ ಮಾವನ ಜತೆ ಅಕ್ರಮ ಸಂಬಂಧ ಹೊಂದಿದ ನವ ವಿವಾಹಿತೆ, ಮದುವೆಯ ನಂತರ ಪತಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಕೇಲವೆ ತಿಂಗಳಲ್ಲಿ ಗಂಡನನ್ನು ಕೊಂದು ಮಾವನ ಜತೆ ಓಡಿ ಹೋಗಿರುವ ಘಟನೆ ಔರಂಗಾಬಾದ್ನಲ್ಲಿ ನಡೆದಿದೆ.
ಔರಂಗಾಬಾದ್ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಮೃತ ಪ್ರಿಯಾಂಶು ಎಂಬಾತನ ಪತ್ನಿ ಗುಂಜಾ ಸಿಂಗ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜೂನ್ 24ರ ರಾತ್ರಿ ನಬಿನಗರ ಪೊಲೀಸ್ ಠಾಣೆ ಪ್ರದೇಶದ ಲೆಂಬೋಕಾಪ್ ಪ್ರಿಯಾಂಶುವನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿತ್ತು.
ಈ ಕೊಲೆಗೆ ಸೂತ್ರಧಾರಿ ಪ್ರಿಯಾಂಶು ಅವರ ಪತ್ನಿ ಗುಂಜಾ ಸಿಂಗ್ ಗೆ ತನ್ನ ತಂದೆಯ ಅಕ್ಕನ ಗಂಡ ಅಂದರೆ ಮಾವ ಜೀವನ್ಸಿಂಗ್ ಜತೆ ಅಕ್ರಮ ಸಂಬಂಧವಿತ್ತು. ಮದುವೆಯ ನಂತರ ಪ್ರಿಯಾಂಶು ಅವರ ಸಂಬಂಧಕ್ಕೆ ಅಡ್ಡಿಯಾಗಿದ್ದ, ಹೀಗಾಗಿ ಇಬ್ಬರೂ ಶೂಟರ್ಗಳನ್ನು ನೇಮಿಸಿಕೊಂಡು ಕೊಲ್ಲಲು ಸಂಚು ರೂಪಿಸಿದ್ದರು
ಜೂನ್ 24ರಂದು ಪ್ರಿಯಾಂಶು ರಾತ್ರಿ ಗ್ರಾಮವಾದ ಬರ್ವಾನ್ಗೆ ಬೈಕ್ನಲ್ಲಿ ಹಿಂದಿರುಗುತ್ತಿದ್ದಾಗ, ಗುಂಡು ಹಾರಿಸಲಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ವಿಶೇಷ ತನಿಖಾ ತಂಡ ರಚಿಸಿದರು. ಈ ತಂಡ ಗುಂಜಾ ಸಿಂಗ್, ಜೈಶಂಕರ್ ಮತ್ತು ಮುಖೇಶ್ ಶರ್ಮಾ ಅವರನ್ನು ಬಂಧಿಸಿದೆ.
ವಿಚಾರಣೆ ಸಮಯದಲ್ಲಿ ತನ್ನ ಗಂಡನ ಕೊಲೆಯಲ್ಲಿ ತನ್ನ ಕೈವಾಡವಿದೆ ಎಂದು ಗುಂಜಾ ಒಪ್ಪಿಕೊಂಡಿದ್ದಾಳೆ. ಪೊಲೀಸರು ಜೀವನ್ ಸಿಂಗ್ನನ್ನು ಕೂಡ ಬಂಧಿಸಿದ್ದಾರೆ.