Cancer Hospital 2
Beereshwara 36
LaxmiTai 5

*ಮನೆಗೆ ಹೋದರೆ ತಂದೆ ಹೊಡೆಯುತ್ತಾರೆ; ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ವಿರುದ್ಧ ಮಗಳು ನಿಶಾ ಯೋಗೇಶ್ವರ್ ಗಂಭೀರ ಆರೋಪ*

Anvekar 3
GIT add 2024-1

ಹತಾಶೆ, ನಿರಾಸೆಯಿಂದ ಕಣ್ಣೀರಾದ ನಿಶಾ

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುದ್ದಿ ಹೊಸ ಸಂಚಲನ ಸೃಷ್ಟಿಸಿದೆ. ನಿನ್ನೆ ಮೊನ್ನೆವರೆಗೂ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್, ನನ್ನ ಇಚ್ಛೆಗೆ ತಂದೆ ಯಾವತ್ತೂ ಅಡ್ಡಿ ಬರಲ್ಲ, ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಸೇರಲು ವರ್ಷದಿಂದ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿಕೊಂಡು ಬಂದಿದ್ದರು. ಆದರೆ ಇಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ನಿಶಾ ಯೋಗೇಶ್ವರ್ ತನ್ನ ತಂದೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Emergency Service

ನಾನು ಯೋಗೇಶ್ವರ್ ಅವರ ಮೊದಲ ಹೆಂಡತಿಯ ಮಗಳು ಎಂಬುದನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮೊದಲ ಹೆಂಡತಿ ಮಗಳಾಗಿರುವ ಕಾರಣಕ್ಕೆ ನನಗೆ ಅವರ ಮನೆಯಲ್ಲಿ ಸ್ಥಾನವಿಲ್ಲ. ನನ್ನ ಚಿಕ್ಕಮ್ಮ ಅಂದರೆ ಮಲತಾಯಿ ನನಗೆ ಎಂದೂ ಅಮ್ಮನಾಗಿರಲಿಲ್ಲ. ಅವರು ಬಿಡಿ ಆದರೆ ಸಾರ್ವಜನಿಕ ಬದುಕಿನಲ್ಲಿ ನನ್ನ ತಂದೆಯೇ ಆದರ್ಶ ಅಪ್ಪ ಆಗಲಿಲ್ಲ. ನಾನು ಕಳೆದ 24 ವರ್ಷಗಳಿಂದ ವನವಾಸ ಅನುಭವಿಸುತ್ತಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ.

ಜನರ ಒತ್ತಾಯದ ಮೇರೆಗೆ ನಾನು ಅಪ್ಪನೊಂದಿಗೆ ರಾಜಿ ಮಾಡಿಕೊಂಡು ಅವರೊಂದಿಗಿರಲು ಹೀದರೆ ನನ್ನ ತಂದೆ ರಪರಪ ಅಂತಾ ಹೊಡೆಯುತ್ತಾರೆ. ಮನೆ ಬಳಿ ಹೋದರೆ ಪೊಲೀಸರನ್ನ ಬಿಡುತ್ತಾರೆ. ಮಾತನಾಡಿಸಲು ಹೋದರೆ ಹೊಡೆದು ಕಳಿಸ್ತಾರೆ. ಆಚೆ ಹೋಗಿ ಭಿಕ್ಷೆ ಬೇಡಿಯಾದರೂ ಬದುಕು ಮನೆಗೆ ಮಾತ್ರ ಬರಬೇಡ ಎನ್ನುತ್ತಾರೆ. ನಾನು ತಪ್ಪು ಮಾಡಿದ್ದರೆ ಹೊಡೆದರೆ ಸಹಿಸಿಕೊಳ್ಳುತ್ತಿದ್ದೆ. ಆದರೆ ನಾನು ಮಾಡದ ತಪ್ಪಿಗೆ ಮನಬಂದಂತೆ ಹೊಡೆದರೂ ಹೇಗೆಸಹಿಸಿಕೊಳ್ಳಲಿ? ತಂದೆಯೇ ನನ್ನ ಮೇಲೆ ಸೇಡು ತಿರಿಸಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದೆ. ಆದರೂ ಮಗಳು ಎಂಬ ಕಾರಣಕ್ಕೆ ಮಾನವೀಯತೆಯನ್ನಾದರೂ ತೋರಬೇಕಿತ್ತಲ್ಲವೇ? ನೀನು ಓರ್ವ ಆದರ್ಶ ಮಗಳಾಗು ಎಂದು ಹೇಳುತ್ತಾರೆ. ಇಷ್ಟು ವರ್ಷ ಎಲ್ಲವನ್ನು ಸಹಿಸಿ ಆದರ್ಶ ಮಗಳಾಗಿಯೇ ಇದ್ದೆ. ಆದರೆ ದೊಡ್ಡ ರಾಜಕಾರಣಿಯಾಗಿ, ಒಬ್ಬ ಆದರ್ಶ ತಂದೆ ನೀವೂ ಆಗಬಹುದಿತ್ತಲ್ಲವೇ? ಇಷ್ಟು ವರ್ಷ ಆದರ್ಶ ಮಗಳಾಗಿ ಇದ್ದಿದ್ದಕ್ಕೆ ನನಗೆ ಸಿಕ್ಕಿದ್ದು ಏನು? ಎಲ್ಲರನ್ನೂ ಕಳೆದುಕೊಂಡಿದ್ದೇನೆ ಎಂದು ಹತಾಶರಾಗಿ ಕಣ್ಣೀರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಂದೆಯ ವಿರುದ್ಧ ಆರೋಪ ಮಾಡಿರುವ ನಿಶಾ ಯೋಗೇಶ್ ವಿಡಿಯೋ ರಾಜ್ಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದೆ.


Bottom Add3
Bottom Ad 2